Publish Date: Sat, 28 Apr 2018 (14:36 IST)
Updated Date: Sat, 28 Apr 2018 (14:37 IST)
ಮಾಧ್ಯಮವನ್ನು ನಿಂದಿಸಿದ ಆರೋಪಡಿಯಲ್ಲಿ ತೆಲುಗು ಚಿತ್ರರಂಗದ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆಯಂತೆ.
ಇತ್ತೀಚಿಗೆ ಪವನ್ ಕಲ್ಯಾಣ್ ಅವರು ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ಕರೆ ಮಾಡಿ ಅವಮಾನಕರ ಪದಗಳಿಂದ ನಿಂದಿಸಿದ್ದ ಹಿನ್ನಲೆಯಲ್ಲಿ ಆ ಮಾಧ್ಯಮದ ನಿರ್ದೇಶಕರು ಹೈದರಾಬಾದ್ನ ಬಂಜಾರಾ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಪವನ್ ಕಲ್ಯಾಣ್ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ಪವನ್ ಕಲ್ಯಾಣ್ ಟ್ವಿಟರ್ನಲ್ಲಿ ಮಾಡಿದ್ದ ಕಾಮೆಂಟ್ಗಳು, ಖಾಸಗಿ ಟಿವಿ ಚಾನಲ್ನ ಸಿಇಒ, ಉದ್ಯೋಗಿಗಳನ್ನು ನಿಂದಿಸಿದ ಆಡಿಯೋ ಸಾಕ್ಷ್ಯಗಳನ್ನು ಪೊಲೀಸರಿಗೆ ನೀಡಿದ್ದು, ಇವುಗಳನ್ನು ಪರಿಶೀಲಿಸಿದ ಪೊಲೀಸರು ಪವನ್ ಕಲ್ಯಾಣ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ