Select Your Language

Notifications

webdunia
webdunia
webdunia
webdunia

ಪ್ರಾಮಾಣಿಕವಾಗಿ ಪ್ರಾಮಾಣಿಕರಿಗೆ ಮತದಾನ ಮಾಡಿ’ ಅಭಿಮಾನಿಗಳಲ್ಲಿ ಮನವಿ ಮಾಡಿದ ನಟ ಕಿಶೋರ್

ಪ್ರಾಮಾಣಿಕವಾಗಿ ಪ್ರಾಮಾಣಿಕರಿಗೆ ಮತದಾನ ಮಾಡಿ’ ಅಭಿಮಾನಿಗಳಲ್ಲಿ ಮನವಿ ಮಾಡಿದ ನಟ ಕಿಶೋರ್
ಬೆಂಗಳೂರು , ಶನಿವಾರ, 28 ಏಪ್ರಿಲ್ 2018 (14:34 IST)
ರಾಜ್ಯ ವಿಧಾನ ಸಭಾ ಚುನಾವಣೆ ಸಮೀಪಿಸಿರುವ ಹಿನ್ನಲೆಯಲ್ಲಿ ಸಿನಿಮಾ ತಾರೆಯರು ಖಡ್ಡಾಯವಾಗಿ ಮತ ಚಲಾಯಿಸುವಂತೆ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡುತ್ತಿದ್ದು, ಅದೇರೀತಿ ಇದೀಗ ನಟ ಕಿಶೋರ್ ಅವರು ಕೂಡ ತಮ್ಮ  ಅಭಿಮಾನಿಗಳಲ್ಲಿ ಪ್ರಾಮಾಣಿಕವಾಗಿ ಪ್ರಾಮಾಣಿಕರಿಗೆ ಮತದಾನ ಮಾಡಿ ಎಂದು ಮನವಿ ಮಾಡಿದ್ದಾರೆ.
ದುಡ್ಡಿಗಾಗಿ ಮತ್ತು ಇತರ ಆಮಿಷಗಳಿಗೆ ಮತದಾನ ಮಾಡುವುದನ್ನು ನಮ್ಮ ಜನ ಕಡಿಮೆ ಮಾಡಬೇಕು. ಇನ್ನು ತಮ್ಮ ಏರಿಯಾಗಳಲ್ಲಿ ನಡೆಯುವ ಕೆಲ ಕಾರ್ಯಕ್ರಮಗಳಿಗೆ ಅನವಶ್ಯಕವಾಗಿ ನಾವು ರಾಜಕಾರಣಿಗಳನ್ನು ಬಳಸಿಕೊಳ್ಳುತ್ತೇವೆ. ಅದೆಲ್ಲವನ್ನು ಬಿಟ್ಟಾಗ ನಮಗೆ ಒಬ್ಬ ಒಳ್ಳೆಯ ಅಭ್ಯರ್ಥಿಗಳು ಸಿಗುತ್ತಾರೆ. 
 
ಉಳಿದೆಲ್ಲ ದೇಶಗಳಿಗಿಂತ ಭಾರತ ಸಂಪಧ್ಬರಿತ ರಾಷ್ಟ್ರವಾಗಿದೆ. ಆ ಸಂಪತ್ತನ್ನು ಹೆಚ್ಚಿಸುವ ಸಲುವಾಗಿ ಪ್ರಾಮಾಣಿಕವಾಗಿ, ಪ್ರಾಮಾಣಿಕರಿಗೆ ಮತದಾನ ಮಾಡಿ. ಮತದಾನ ಮಾಡಿದ ಮೇಲೆ ಜನಪ್ರತಿನಿಧಿಗಳು ಕೆಲಸ ಮಾಡಿಲ್ಲ ಕೆಲವು ಜನ ದೂರು ಮಾಡುತ್ತಾರೆ. ಆದರೆ ಅವರು ನಿಜಕ್ಕೂ ಓಟ್ ಹಾಕಿರುವುದಿಲ್ಲ ಅವರೇ ದೂರುವವರು' ಎಂದು ನಟ ಕಿಶೋರ್ ಅವರು ಹೇಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಸಿನಿಮಾಕ್ಕಾಗಿ ದೇಹದ ತೂಕ ಇಳಿಸಿಕೊಂಡ ನಟ ಸುದೀಪ್