Publish Date: Fri, 27 Apr 2018 (06:54 IST)
Updated Date: Fri, 27 Apr 2018 (06:56 IST)
ಬೆಂಗಳೂರು : ಸಿನಿಮಾಗೋಸ್ಕರ ನಟ-ನಟಿಯರು ತಮ್ಮ ಸ್ಟೈಲ್, ವೇಷಭೂಷಣವನ್ನು ಬದಲಾಯಿಸುತ್ತಾರೆ. ಅದೇರೀತಿ ಇದೀಗ ನಟ ಸುದೀಪ್ ಅವರು ಸಿನಿಮಾವೊಂದಕ್ಕಾಗಿ ದೇಹದ ತೂಕವನ್ನು ಇಳಿಸಿಕೊಂಡಿದ್ದಾರೆ.
ರೆಬಲ್ ಸ್ಟಾರ್ ಅಂಬರೀಶ್ ಅವರು ನಾಯಕ ನಟರಾಗಿ ಅಭಿನಯಿಸಿರುವ 'ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರದಲ್ಲಿ ಅವರ ಸಣ್ಣ ವಯಸ್ಸಿನ ಪಾತ್ರವನ್ನು ಸುದೀಪ್ ಅವರು ನಿರ್ವಹಿಸುತ್ತಿದ್ದಾರೆ. ಆ ಕಾರಣಕ್ಕಾಗಿ ಸುದೀಪ್ ಅವರು 10 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಆದ ಕಾರಣ ಅವರನ್ನು ಇತ್ತಿಚೆಗೆ ಕಾರ್ಯಕ್ರಮಗಳಲ್ಲಿ ನೋಡಿದವರಿಗೆ ಅವರು ತೆಳ್ಳಗೆ ಕಾಣುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ