Publish Date: Mon, 23 Apr 2018 (06:07 IST)
Updated Date: Mon, 23 Apr 2018 (06:09 IST)
ಹೈದರಾಬಾದ್ : ನಟ ಮಾಧವನ್ ಅಭಿಮಾನಿಗಳಿಗೊಂದು ಸಿಹಿ ಸುದ್ದಿ. ಅದೇನೆಂದರೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನಟ ಮಾಧವನ್ ಅವರು ಇದೀಗ ಗುಣಮುಖರಾಗಿ ಮತ್ತೆ ಚಿತ್ರರಂಗಕ್ಕೆ ವಾಪಾಸಾಗಿದ್ದಾರೆ.
ಈ ಬಗ್ಗೆ ಸ್ವತಃ ಅವರೇ ತಮ್ಮ ಟ್ವೀಟರ್ ನಲ್ಲಿ ಐ ವಿಲ್ ಬಿ ಬ್ಯಾಕ್ ಸೂನ್ ಎಂದು ಹೇಳಿಕೊಂಡಿದ್ದಾರೆ. ಭುಜದ ನೋವಿನಿಂದ ಬಳಲುತ್ತಿದ್ದ ನಟ ಮಾಧವನ್ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕಾರಣ ಯಾವುದೇ ಚಿತ್ರದಲ್ಲಿ ನಟಿಸಲು ಸಾಧ್ಯವಾಗಿರಲಿಲ್ಲ. ಇದರಿಂದಾಗಿ ಅವರು ಬಾಲಿವುಡ್ ನಲ್ಲಿ ಬಂದ ಉತ್ತಮ ಅವಕಾಶಗಳನ್ನು ಕಳೆದುಕೊಂಡಿದ್ದರು. ಆದರೆ ಇದೀಗ ಮತ್ತೆ ಚಿತ್ರರಂಗಕ್ಕೆ ವಾಪಾಸಾದ ನಟ ಮಾಧವನ್ ಅವರು ತೆಲುಗು ಚಿತ್ರ ಸವ್ಯಸಾಚಿಯಲ್ಲಿ ನಟಿಸಲಿದ್ದು, ನಾಗ ಚೈತನ್ಯ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ.
ಹಾಗೇ ಸಿಂಬಾ ಚಿತ್ರದಲ್ಲಿ ನಟಿಸಲು ಸಾಧ್ಯವಾಗದಕ್ಕೆ ಬೇಸರ ವ್ಯಕ್ತಪಡಿಸಿರುವ ಮಾಧವನ್, ನಾನು ರೋಹಿತ್ ಶರ್ಮಾ ಅವರ ದೊಡ್ಡ ಅಭಿಮಾನಿಯಾಗಿದ್ದೇನೆ. ಆದರೆ ಅವರ ಚಿತ್ರದಲ್ಲಿ ನಾನು ನಟಿಸಲು ಸಾಧ್ಯವಾಗದ್ದಕ್ಕೆ ಬೇಸವರಾಗಿದೆ. ಭುಜದ ನೋವಿನ ಕಾರಣಕ್ಕಾಗಿ ನನಗೆ ಚಿತ್ರದಲ್ಲಿ ನಟಿಸಲು ಸಾಧ್ಯವಾಗಲಿಲ್ಲ. ಇದೀಗ ಗುಣಮುಖನಾಗುತ್ತಿದ್ದು, ಆದರೆ ಬಹುದೊಡ್ಡ ಅವಕಾಶವನ್ನು ಕಳೆದುಕೊಂಡಿದ್ದಕ್ಕೆ ಬೇಸರವಾಗಿದೆ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ