Publish Date: Wed, 02 May 2018 (06:26 IST)
Updated Date: Wed, 02 May 2018 (06:28 IST)
ಬೆಂಗಳೂರು : ತೆಲುಗು ನಟಿ ಶ್ರೀರೆಡ್ಡಿ ಅವರು ಕಾಸ್ಟಿಂಗ ಕೌಚ್ ವಿರೋಧಿಸಿ ಪ್ರತಿಭಟನೆ ನಡೆಸಿದ ಮೇಲೆ ಈ ಬಗ್ಗೆ ಸಿನಿಮಾ ರಂಗದಲ್ಲಿ ಬಹಳಷ್ಟು ಚರ್ಚೆಯಾಗುತ್ತಿದ್ದು ಇದೀಗ ನಟಿ ರಾಗಿಣಿ ಅವರು ಕಾಸ್ಟಿಂಗ ಕೌಚ್ ವಿರುದ್ಧ ಕಿಡಿಕಾರಿದ್ದಾರೆ.
‘ಕಿಚ್ಚು’ ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಟಿ ರಾಗಿಣಿ ಅವರು,’ ಕಾಸ್ಟಿಂಗ್ ಕೌಚ್ ನಟಿಯರ ಬಿಟ್ಟ ವಿಚಾರ. ಅದು ಅವರ ವೈಯಕ್ತಿಕ ವಿಷಯ. ಆದರೆ, ನನಗೆ ಈ ರೀತಿಯ ಯಾವುದೇ ಅನುಭವವಾಗಿಲ್ಲ. ಒಂದು ಕೈಯಿಂದ ಚಪ್ಪಾಳೆ ತಟ್ಟುವುದಕ್ಕೆ ಆಗಲ್ಲ. ಎರಡು ಕೈ ಸೇರಿದರೆ ಚಪ್ಪಾಳೆ ಆಗುತ್ತದೆ. ಇನ್ನು ನಟಿಯರನ್ನು ಮಂಚಕ್ಕೆ ಕರೆಯುವುದು ಮಾತ್ರ ಕೆಟ್ಟ ಸಂಸ್ಕೃತಿ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ