Select Your Language

Notifications

webdunia
webdunia
webdunia
webdunia

ತಮ್ಮ ಕುಚುಕು ಗೆಳೆಯನ ಮನೆಗೆ ಭೇಟಿ ನೀಡಿದ ನಟ ಅಂಬರೀಶ್

ತಮ್ಮ ಕುಚುಕು ಗೆಳೆಯನ ಮನೆಗೆ ಭೇಟಿ ನೀಡಿದ ನಟ ಅಂಬರೀಶ್
ಬೆಂಗಳೂರು , ಮಂಗಳವಾರ, 1 ಮೇ 2018 (07:47 IST)
ಬೆಂಗಳೂರು : ರೆಬಲ್ ಸ್ಟಾರ್ ಅಂಬರೀಶ್ ಅವರು ಬಹಳ ವರ್ಷಗಳ ನಂತರ ತಮ್ಮ ಕುಚುಕು ಗೆಳೆಯ ಡಾ.ವಿಷ್ಣುವರ್ಧನ್ ಅವರ ಮನೆಗೆ ಭೇಟಿ ನೀಡಿದ್ದಾರೆ.


ಸ್ಯಾಂಡಲ್ ವುಡ್ ನ ದಿಗ್ಗಜರು ಎಂದು ಕರೆಯುವ ಅಂಬರೀಶ್ ಹಾಗೂ ವಿಷ್ಣುವರ್ಧನ್ ಇಬ್ಬರು ಉತ್ತಮ ಸ್ನೇಹಿತರಾಗಿದ್ದರು. ಇವರ ಸ್ನೇಹ ಎಂಥಹದು ಅಂದ್ರೆ ಇಂದಿಗೂ ಆ ಸ್ನೇಹವನ್ನ ಯಾರಿಂದನೂ ಮುರಿಯಲು ಆಗಿಲ್ಲ. ಆದರೆ ವಿಷ್ಣುವರ್ಧನ್ ಅವರು  ಅಗಲಿದ ಬಹಳ ವರ್ಷಗಳ ನಂತರ ಇದೀಗ ಅಂಬರೀಶ್ ಅವರು ತಮ್ಮ ಗೆಳೆಯನ ಮನಗೆ ಭೇಟಿ ನೀಡಿದ್ದಾರೆ. ಜಯನಗರದಲ್ಲಿ ಅಂಬರೀಶ್ ನಟನೆಯ "ಅಂಬಿ ನಿಂಗ್ ವಯಸ್ಸಾಯ್ತೊ" ಚಿತ್ರೀಕರಣ ನಡೆಯುತ್ತಿದ್ದು, ಈ ವೇಳೆ ಹತ್ತಿರದಲ್ಲೇ ಇದ್ದ ವಿಷ್ಣುವರ್ಧನ್ ಮನೆಗೆ ತೆರಳಿ ಭಾರತಿ ವಿಷ್ಣುವರ್ಧನ್ ಜೊತೆ ಕೆಲ ಕಾಲ ಮಾತನಾಡಿ ಯೋಗಕ್ಷೇಮ ವಿಚಾರಿಸಿದ್ದಾರೆ. ಇನ್ನು ಅಂಬರೀಶ್ ಅವರು ಭೇಟಿ ಮಾಡಿದ ಸಮಯದಲ್ಲಿ ತೆಗೆದ ಫೋಟೊ ಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಾ ಇವೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಟ್ವೀಟರ್ ನಲ್ಲಿ ಯುವತಿಯೊಬ್ಬಳು ಜಗ್ಗೇಶ್ ರನ್ನು ತರಾಟೆಗೆ ತೆಗೆದುಕೊಂಡಿದ್ಯಾಕೆ...?