Publish Date: Mon, 30 Apr 2018 (08:10 IST)
Updated Date: Mon, 30 Apr 2018 (08:12 IST)
ಬೆಂಗಳೂರು: ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧ ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 4 ವಿಕೆಟ್ ಗಳಿಂದ ಸೋಲೊಪ್ಪಿಕೊಂಡಿದೆ. ಸತತ ಸೋಲಿನಿಂದ ಕಂಗೆಟ್ಟಿರುವ ತಂಡದ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಮಾತಾಡಿದ್ದಾರೆ.
ನಿನ್ನೆಯ ಪಂದ್ಯದಲ್ಲಿ ಕೊಹ್ಲಿ 44 ಎಸೆತಗಳಲ್ಲಿ 65 ರನ್ ಸಿಡಿಸಿದ್ದರು. ಇದರಿಂದಾಗಿ ಆರ್ ಸಿಬಿ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು. ಉಳಿದವರು ಯಾರೂ ಹೇಳಿಕೊಳ್ಳುವಂತಹ ಬ್ಯಾಟಿಂಗ್ ಮಾಡಿಲ್ಲ. ಫೀಲ್ಡಿಂಗ್ ಕೂಡಾ ತೀರಾ ಕಳಪೆಯಾಗಿತ್ತು. ಬೌಲರ್ ಗಳೂ ಸೂಕ್ತ ಸಮಯದಲ್ಲಿ ವಿಕೆಟ್ ಕೀಳಲು ವಿಫಲರಾದರು. ಹೀಗಾಗಿ ಕೊಹ್ಲಿ ಸಿಟ್ಟಾಗಿದ್ದರು.
ಪಂದ್ಯದ ನಂತರ ಮಾತನಾಡಿದ ಕೊಹ್ಲಿ ಈ ರೀತಿ ಫೀಲ್ಡಿಂಗ್ ಮಾಡಿದರೆ ಸೋಲು ಗ್ಯಾರಂಟಿ ಎಂದು ಕೊಹ್ಲಿ ಹತಾಶೆಯಿಂದಲೇ ಹೇಳಿಕೊಂಡಿದ್ದಾರೆ. 175 ರನ್ ಸಿಡಿಸಿದ ಬಳಿಕ ನಮಗೆ ಗೆಲ್ಲುವ ಅವಕಾಶವಿತ್ತು. ಆದರೆ ಕಳಪೆ ಫೀಲ್ಡಿಂಗ್ ನಿಂದ ಗೆಲುವು ಕೈ ಜಾರಿತು’ ಎಂದು ಕೊಹ್ಲಿ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.