Publish Date: Sat, 28 Apr 2018 (06:21 IST)
Updated Date: Sat, 28 Apr 2018 (06:23 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮುಂಬರುವ ಇಂಗ್ಲೆಂಡ್ ಸರಣಿಗೆ ಸಜ್ಜಾಗಲು ಅಲ್ಲಿನ ಕೌಂಟಿ ಕ್ರಿಕೆಟ್ ನಲ್ಲಿ ಆಡುವ ನಿರ್ಧಾರ ಮಾಡಿದ್ದರು. ಆದರೆ ಇದೀಗ ಆ ಕನಸು ಭಗ್ನವಾಗುವ ಸಾಧ್ಯತೆಯಿದೆ.
ಕೌಂಟಿ ಕ್ರಿಕೆಟ್ ಆಡಬೇಕಾದರೆ ಇದೇ ಮೊದಲು ಭಾರತಕ್ಕೆ ಟೆಸ್ಟ್ ಸರಣಿ ಆಡಲು ಬರುತ್ತಿರುವ ಆಫ್ಘಾನಿಸ್ತಾನ ಸರಣಿಯಿಂದ ಕೊಹ್ಲಿ ಹೊರಗುಳಿಯಬೇಕಾಗುತ್ತದೆ. ಅದಕ್ಕೂ ಕೊಹ್ಲಿ ತಯಾರಾಗಿದ್ದರು.
ಆದರೆ ಇದೀಗ ಬಿಸಿಸಿಐ ಕೊಹ್ಲಿಗೆ ಕೌಂಟಿ ಕ್ರಿಕೆಟ್ ಬಿಟ್ಟು ಅಫ್ಘಾನಿಸ್ತಾನ ಸರಣಿಯಲ್ಲಿ ಆಡಲು ಸೂಚಿಸಿದೆ ಎನ್ನಲಾಗಿದೆ. ಆದರೆ ಕೊಹ್ಲಿ ಅಫ್ಘಾನಿಸ್ತಾನ ಸರಣಿಯಿಂದ ಹೊರಗುಳಿದರೆ ಆ ತಂಡಕ್ಕೆ ಅವಮಾನ ಮಾಡಿದಂತಾಗುತ್ತದೆ ಎನ್ನುವ ಉದ್ದೇಶದಿಂದ ಬಿಸಿಸಿಐ ಇದೀಗ ಕೊಹ್ಲಿಗೆ ಕೌಂಟಿ ಕ್ರಿಕೆಟ್ ಆಡುವ ನಿರ್ಧಾರ ಕೈ ಬಿಡುವಂತೆ ಸೂಚಿಸಿದೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.