Publish Date: Fri, 27 Apr 2018 (08:45 IST)
Updated Date: Fri, 27 Apr 2018 (08:48 IST)
ಬೆಂಗಳೂರು: ಚಿನ್ನಸ್ವಾಮಿ ಅಂಗಣದಲ್ಲಿ ಧೋನಿ ನೇತೃತ್ವದ ಸಿಎಸ್ ಕೆ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಲುತ್ತಿದ್ದರೆ ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ ಬೇಸರದಲ್ಲಿದ್ದರು.
ಪತಿ ವಿರಾಟ್ ನೇತೃತ್ವದ ಆರ್ ಸಿಬಿಗೆ ಚಿಯರ್ ಅಪ್ ಮಾಡಲು ಬಂದಿದ್ದ ಅನುಷ್ಕಾ ಪಂದ್ಯ ಸೋಲಿನ ಕಡೆಗೆ ಮುಖ ಮಾಡುತ್ತಿದ್ದಂತೆ ಬೇಸರದಲ್ಲಿ ತಮ್ಮ ಜತೆಗಿದ್ದವರ ಬಳಿ ಮಾತಾಡಿಕೊಳ್ಳುತ್ತಿದ್ದರು.
ಅಷ್ಟೇ ಅಲ್ಲ, ಪತಿಯ ತಂಡ ಸೋತ ನಿರಾಸೆ ಅವರ ಮುಖದಲ್ಲಿ ಸ್ಪಷ್ಟವಾಗಿತ್ತು. ಅರೆ ಕ್ಷಣ ಸ್ತಬ್ಧರಾಗಿ ನಿಂತು ಆರ್ ಸಿಬಿ ತಂಡ ಪೆವಿಲಿಯನ್ ಕಡೆಗೆ ಮರಳುತ್ತಿರುವುದನ್ನು ನೋಡುತ್ತಾ ನಿಂತರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.