Publish Date: Wed, 25 Apr 2018 (07:54 IST)
Updated Date: Wed, 25 Apr 2018 (07:55 IST)
ನವದೆಹಲಿ: ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿಯನ್ನೂ ಹಿಂದಿಕ್ಕಿ ಆರೆಂಜ್ ಕ್ಯಾಪ್ ಹಕ್ಕುದಾರರಾಗಿರುವ ಸಂಜು ಸ್ಯಾಮ್ಸನ್ ಈ ಗೌರವಕ್ಕೆ ನಾಲಾಯಕ್ ಎಂದು ವಿನೋದ್ ಕಾಂಬ್ಳಿ ಹೇಳಿದ್ದಾರೆ.
ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ ಸಂಜು ಸ್ಯಾಮ್ಸನ್ ಪ್ರಸಕ್ತ ಐಪಿಎಲ್ ನಲ್ಲಿ ತಮ್ಮ ತಂಡದ ಪರ ಉಪಯುಕ್ತ ಇನಿಂಗ್ಸ್ ಆಡಿ ಗರಿಷ್ಠ ರನ್ ಸಂಪಾದಿಸಿದ್ದಾರೆ.
‘ಕ್ರಿಕೆಟ್ ಕಾಮೆಂಟೇಟರ್ ಗಳು, ಸಂಜು ಸ್ಯಾಮ್ಸನ್ ಬಗ್ಗೆ ಹೊಗಳುವ ಪರಿ ನೋಡಿದರೆ ಅವರಿಗೆ ಹೇಳಲು ಬೇರೆ ಯಾವುದೇ ವಿಷಯಗಳಿಲ್ಲವೆನಿಸುತ್ತದೆ. ಬರೀ ಬೋರಿಂಗ್’ ಎಂದು ಕಾಂಬ್ಳಿ ಟ್ವೀಟ್ ಮಾಡಿದ್ದಾರೆ.
‘ಆತ ಶ್ರೇಷ್ಠ ಆಟಗಾರನೆನಿಸಿಕೊಳ್ಳಬೇಕಾದರೆ ಒಂದು ಶತಕವಾದರೂ ಹೊಡೆದು ತೋರಿಸಬೇಕು. ಇದು ನನ್ನ ಬಹಿರಂಗ ಸವಾಲು’ ಎಂದು ಕಾಂಬ್ಳಿ ಹೇಳಿಕೊಂಡಿದ್ದಾರೆ. ಇದಕ್ಕೆ ಹಲವರು ಕಾಂಬ್ಳಿ ಮೇಲೆ ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.