Publish Date: Mon, 23 Apr 2018 (20:26 IST)
Updated Date: Mon, 23 Apr 2018 (20:27 IST)
ನವದೆಹಲಿ: ಈಗಾಗಲೇ ಟೂರ್ನಿಯಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಗೌತಮ್ ಗಂಭೀರ್ ನೇತೃತ್ವದ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ ಇದೀಗ ಐಪಿಎಲ್ ಪಂದ್ಯವಾಡುತ್ತಿದ್ದು, ಹೊಡೆಬಡಿಯ ಆಟಗಾರ ಕ್ರಿಸ್ ಗೇಲ್ ಗೇ ಕೊಕ್ ಕೊಟ್ಟಿದೆ.
ಇದಕ್ಕೆ ಕಾರಣ ಗೇಲ್ ಗಾಯಗೊಂಡಿರುವುದು. ಈ ಐಪಿಎಲ್ ಆವೃತ್ತಿಯಲ್ಲಿ ಮೊದಲ ಶತಕ ಗಳಿಸಿದ್ದಲ್ಲದೆ, ಭರ್ಜರಿ ಫಾರ್ಮ್ ನಲ್ಲಿರುವ ಗೇಲ್ ಗಾಯಗೊಂಡಿರುವುದು ಪಂಜಾಬ್ ಪಾಳಯದಲ್ಲಿ ಆತಂಕ ಸೃಷ್ಟಿಸಿದೆ.
ಅವರ ಗಾಯ ಗಂಭೀರವಲ್ಲದಿದ್ದರೂ ಒಂದು ಪಂದ್ಯದ ಮಟ್ಟಿಗಾದರೂ ವಿಶ್ರಾಂತಿ ಅನಿವಾರ್ಯವಾದ್ದರಿಂದ ತಂಡದಿಂದ ಹೊರಗುಳಿಸಲಾಯಿತು ಎಂದು ಟಾಸ್ ಗೂ ಮುನ್ನ ಪಂಜಾಬ್ ನಾಯಕ ಅಶ್ವಿನ್ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.