Publish Date: Mon, 23 Apr 2018 (18:13 IST)
Updated Date: Mon, 23 Apr 2018 (18:16 IST)
ಪುಣೆ: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ಬ್ಯಾಟ್ ಮೂಲಕ ಹೆಚ್ಚು ಸಾಹಸ ಪ್ರದರ್ಶಿಸಲು ಸಾಧ್ಯವಾಗದಿದ್ದರೂ ಅವರು ಕೇಂದ್ರ ಬಿಂದುವಾದರು.
ಅದಕ್ಕೆ ಕಾರಣ ಧೋನಿಯ ಹುಚ್ಚು ಅಭಿಮಾನಿಗಳು. ಧೋನಿ ಮೈದಾನದಲ್ಲಿ ಆಡುತ್ತಿದ್ದರೆ ಯುವತಿಯೊಬ್ಬಳು ಧೋನಿಗೆ ಪ್ರಪೋಸ್ ಮಾಡುವ ಪ್ಲಾಕಾರ್ಡ್ ಹಿಡಿದುಕೊಂಡು ತನ್ನ ಲವ್ ತೋರಿಸಿಕೊಂಡಳು.
ಇದು ಇಷ್ಟಕ್ಕೇ ಮುಗಿಯಲಿಲ್ಲ. ಧೋನಿ ಬ್ಯಾಟ್ ಹಿಡಿದು ಮೈದಾನಕ್ಕಿಳಿದಾಗ ಓರ್ವ ಅಭಿಮಾನಿ ನೇರವಾಗಿ ಮೈದಾನಕ್ಕೇ ಓಡಿ ಬಂದು ಕಾಲು ಮುಟ್ಟಿ ನಮಸ್ಕರಿಸಿದ. ಈ ದೃಶ್ಯಗಳು ಭಾರೀ ವೈರಲ್ ಆಗಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.