Publish Date: Sat, 28 Apr 2018 (06:28 IST)
Updated Date: Sat, 28 Apr 2018 (06:29 IST)
ಮುಂಬೈ: ಭಾರತ ಎ ತಂಡದ ನಾಯಕ, ಡೆಲ್ಲಿ ಡೇರ್ ಡೆವಿಲ್ಸ್ ಆಟಗಾರ ಪೃಥ್ವಿ ಶಾ ಐಪಿಎಲ್ ನಲ್ಲಿ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ.
18 ವರ್ಷ 169 ದಿನಗಳನ್ನು ಪೂರೈಸಿರುವ ಯುವ ಬ್ಯಾಟ್ಸ್ ಮನ್ ಪೃಥ್ವಿ ಶಾ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದು, ಈ ಮೂಲಕ ಐಪಿಎಲ್ ನಲ್ಲಿ ಅರ್ಧಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
44 ಬಾಲ್ ಗಳಲ್ಲಿ 62 ರನ್ ಸಿಡಿಸಿದ ಪೃಥ್ವಿ ಶಾ 2013 ರಲ್ಲಿ ಸಂಜು ಸ್ಯಾಮ್ಸನ್ ಮಾಡಿದ ದಾಖಲೆಯನ್ನು ಮುರಿದಿದ್ದಾರೆ. ಐಪಿಎಲ್ ಪಂದ್ಯಾವಳಿಯಲ್ಲಿ ಅರ್ಧಶತಕ ಗಳಿಸುವಾಗ ಸಂಜು ಸ್ಯಾಮ್ಸನ್ ಗೆ ಆಗ ಪೃಥ್ವಿ ಶಾ ಅವರಷ್ಟೇ ವಯಸ್ಸಾಗಿತ್ತು. ಇದೀಗ ಸಂಜು ಜತೆಗೆ ಶಾ ದಾಖಲೆ ಹಂಚಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.