ಬೆಂಗಳೂರು: 'ಕಾಸ್ಟಿಂಗ್ ಕೌಚ್' ವಿರುದ್ಧ ತೆಲುಗು ನಟಿ ಶ್ರೀರೆಡ್ಡಿ ಪ್ರತಿಭಟನೆ ಎಲ್ಲೆಡೆ ತೀವ್ರ ತರಹದ ಸಂಚಲನ ಮೂಡಿಸಿದೆ. ‘ಕಾಸ್ಟಿಂಗ್ ಕೌಚ್'ನಿಂದ ಕೆಲಸ ಅಂತೂ ಸಿಗುತ್ತೆ. ಕಮ್ಮಿ ಅಂದರೂ ಹೊಟ್ಟೆಗೆ ರೊಟ್ಟಿ ಕೊಡ್ತಾರೆ. ಅತ್ಯಾಚಾರ ಎಸಗಿ ಪರಾರಿ ಆಗುವುದಿಲ್ಲ' ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನೃತ್ಯ ಸಂಯೋಜಕಿ ಸರೋಜ್ ಖಾನ್ ನೀಡಿದ್ದ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಕಾಸ್ಟಿಂಗ್ ಪರವಾಗಿ ದನಿ ಎತ್ತಿ ಸರೋಜ್ ಖಾನ್ ಕೊಟ್ಟ ಹೇಳಿಕೆ ಸರಿಯೋ, ತಪ್ಪೋ ಎಂಬುದರ ಬಗ್ಗೆ ರಿಪಬ್ಲಿಕ್ ಟಿವಿಯಲ್ಲಿ ಚರ್ಚಾ ಕಾರ್ಯಕ್ರಮ ನಡೆಯಿತು. ಈ ವೇಳೆ ಅರ್ನಬ್ ಗೋಸ್ವಾಮಿ ಎದುರು ತಮಗಾದ ಕಾಸ್ಟಿಂಗ್ ಕೌಚ್ ಅನುಭವವನ್ನು ನಟಿ ಸಂಜನಾ ಬಿಚ್ಚಿಟ್ಟರು.
'ಸರೋಜ್ ಖಾನ್ ಗೆ ಇದ್ದ ಪ್ರತಿಭೆಗೆ ನಾನು ಅಭಿಮಾನಿಯಾಗಿದ್ದೆ. ಆದ್ರೆ, ಸರೋಜ್ ಖಾನ್ ಇಂದು ನನ್ನನ್ನ ಹಾಗೂ ನಾನು ಅವರ ಮೇಲೆ ಇಟ್ಟಿದ್ದ ಅಭಿಮಾನವನ್ನ ಕಳೆದುಕೊಂಡಿದ್ದಾರೆ. ಸರೋಜ್ ಖಾನ್ ಗೆ ತಮ್ಮ ಮಾತಿನ ಮೇಲೆ ನಿಗಾ ಇಲ್ಲ' ಎಂದು ನಟಿ ಸಂಜನಾ ಹೇಳಿದ್ದಾರೆ.
'ನಾನು ನನ್ನ ವೃತ್ತಿ ಬದುಕಿನಲ್ಲಿ 45 ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ಈ ಪೈಕಿ ಒಂದು ಸಿನಿಮಾದಲ್ಲಿ ಮಾತ್ರ 'ಕಾಸ್ಟಿಂಗ್ ಕೌಚ್' ನನ್ನ ಅನುಭವಕ್ಕೆ ಬಂದಿದೆ. ನಾನು ಆ ಪ್ರೊಡ್ಯೂಸರ್ ಗೆ ಸರಿಯಾಗಿ ಒದ್ದು ಬಂದಿದ್ದೇನೆ' ಎಂದಿದ್ದಾರೆ ನಟಿ ಸಂಜನಾ.
'ಕಾಸ್ಟಿಂಗ್ ಕೌಚ್ ವಿರುದ್ಧ ದನಿ ಎತ್ತಿರುವ ಶ್ರೀರೆಡ್ಡಿಗೆ ನನ್ನ ಬೆಂಬಲ ಇದೆ. ಚಿತ್ರರಂಗದಲ್ಲಿ ಪ್ರತಿಭಾವಂತರು ತುಂಬಾ ಜನ ಇದ್ದಾರೆ. ಎಲ್ಲೋ ಶೇಕಡ 5 ರಷ್ಟು ಮಂದಿ 'ಕಾಸ್ಟಿಂಗ್ ಕೌಚ್' ಹೆಸರಿನಲ್ಲಿ ಚಿತ್ರರಂಗಕ್ಕೆ ಕೆಟ್ಟ ಹೆಸರು ತರುತ್ತಿದ್ದಾರೆ ಅಷ್ಟೇ. 'ಕಾಸ್ಟಿಂಗ್ ಕೌಚ್' ಬಗ್ಗೆ ಸೂಪರ್ ಸ್ಟಾರ್ ಗಳು ಮೌನ ವಹಿಸಿರುವುದನ್ನು ನಾನು ಖಂಡಿಸುತ್ತೇನೆ' ಎನ್ನುತ್ತಾರೆ ಸಂಜನಾ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ