Publish Date: Sun, 29 Apr 2018 (06:11 IST)
Updated Date: Sun, 29 Apr 2018 (06:13 IST)
ಮುಂಬೈ : ಕಾಸ್ಟಿಂಗ್ ಕೌಚ್ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳು ನಡೆದಿದ್ದು, ಈ ಬಗ್ಗೆ ಸಿನಿಮಾ ತಾರೆಯರು ಕೂಡ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಆದರೆ ಸರೋಜ್ ಖಾನ್ ಅವರ ಹೇಳಿಕೆಯ ಬಗ್ಗೆ ತೀರ್ವ ವಿರೋಧ ವ್ಯಕ್ತವಾಗಿದ್ದು, ಬಾಲಿವುಡ್ ನಟ ಶತ್ರುಘ್ನ ಸಿನ್ಹಾ ಅವರು ಮಾತ್ರ ಅವರ ಮಾತಿಗೆ ಬೆಂಬಲ ಸೂಚಿಸಿದ್ದಾರೆ.
"ಸರೋಜ್ ಖಾನ್ ತುಂಬಾ ಹಿರಿಯ ನೃತ್ಯ ಸಂಯೋಜಕಿ. ಅದೆಷ್ಟೋ ಮಂದಿಯೊಂದಿಗೆ ಕೆಲಸ ಮಾಡಿದ್ದಾರೆ. ಬಾಲಿವುಡ್‍ನಲ್ಲಿ ಲೈಂಗಿಕ ಕಿರುಕುಳದ ಬಗ್ಗೆ ಅವರು ಮಾತನಾಡಿದ್ದಾರೆಂದರೆ. ಅದರ ಬಗ್ಗೆ ಆಕೆಗೆ ಗೊತ್ತಿರುತ್ತದೆ.ಸಿನಿಮಾಗಳಿಗೆ ಬರಲು ಯುವತಿಯರು ಏನೆಲ್ಲಾ ಮಾಡಬೇಕು ಎಂಬುದು ನನಗೆ ಗೊತ್ತು. ಅವರ ಹೇಳಿಕೆಗೆ ನಾನು ಸಂಪೂರ್ಣ ಅನುಮತಿ ನೀಡುತ್ತಿದ್ದೇ" ಎಂದು ನಟ ಶತ್ರುಘ್ನ ಸಿನ್ಹಾ ಅವರು ಹೇಳಿದ್ದಾರೆ.
ಹಾಗೇ ‘ಇನ್ನು ರೇಣುಕಾ ಚೌಧರಿ ನೀಡಿರುವ ಹೇಳಿಕೆಗೂ ನನ್ನ ಬೆಂಬಲ ಇದೆ. ರಾಜಕೀಯದಲ್ಲಿ ಇದನ್ನು ಏನು ಹೇಳಬೇಕೋ ಗೊತ್ತಿಲ್ಲ. ಕಾಸ್ಟಿಂಗ್ ಔಟ್ ಕೋಚ್ ಎಂದು ಕರೆಯಬೇಕೇನೋ. ಆದರೆ ಇದೇ ಸರಿ ಎಂದು ನಾನು ಹೇಳುತ್ತಿಲ್ಲ.ಇಂತಹವು ನನಗೆ ಯಾವಾಗಲೂ ಎದುರಾಗಿಲ್ಲ. ಆದರೆ ನಮ್ಮ ಸುತ್ತಲೂ ಏನು ನಡೆಯುತ್ತಿದೆ ಎಂದು ನಾವು ತಿಳಿದುಕೊಳ್ಳಬಹುದಲ್ಲವೇ. ಹಾಗಾಗಿಯೇ ಸರೋಜ್, ರೇಣುಕಾ ಅವರ ಹೇಳಿಕೆಗಳನ್ನು ಖಂಡಿಸಬೇಡಿ. ಅಂತಹಪರಿಸ್ಥಿತಿಗೆ ಕಾರಣರಾದವರನ್ನು ಖಂಡಿಸಿ’ ಎಂದು ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ