ಮುಂಬೈ : ವಂಚನೆ ಪ್ರಕರಣದಡಿಯಲ್ಲಿ ಬಾಲಿವುಡ್ ನ ಹಾಸ್ಯನಟ ರಾಜ್ ಪಾಲ್ ಯಾದವ್ ಹಾಗೂ ಅವರ ಪತ್ನಿ ಯನ್ನು ದೋಷಿಗಳೆಂದು ನ್ಯಾಯಾಲಯ ತೀರ್ಪು ನೀಡಿದ್ದು, ಇದೀಗ ಅವರು ಆರು ತಿಂಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆಂಬ ಮಾಹಿತಿ ತಿಳಿದುಬಂದಿದೆ.
2013ರಲ್ಲಿ `ಅತಾ ಪತಾ ಲಾಪತಾ' ಚಿತ್ರಕ್ಕಾಗಿ ರಾಜ್ ಪಾಲ್ ಯಾದವ್ ಮತ್ತು ಅವರ ಪತ್ನಿ ಉದ್ಯಮಿ ಎಂ.ಜಿ. ಅಗರ್ವಾಲ್ ಅವರಿಂದ ಐದು ಕೋಟಿ ರೂಪಾಯಿ ಪಡೆದುಕೊಂಡಿದ್ದರು. ಆದರೆ ಅದನ್ನು ಮರುಪಾವತಿ ಮಾಡದೇ ವಂಚನೆ ಮಾಡಿದ್ದರಿಂದ ಉದ್ಯಮಿ ಎಂ.ಜಿ. ಅಗರ್ವಾಲ್ ಅವರು ನಟ ಹಾಗೂ ಆತನ ಪತ್ನಿಯ ವಿರುದ್ಧ ದೂರು ದಾಖಲಿಸಿದ್ದರು. ಆದ್ದರಿಂದ 2013ರಲ್ಲಿಈ ಕೇಸ್ ನ ವಿಚಾರಣೆಗಾಗಿ ರಾಜ್ ಪಾಲ್ ಅವರನ್ನು ಹತ್ತು ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಇಡಲಾಗಿತ್ತು. ಆದರೆ ಇತ್ತಿಚೆಗೆ ಕೋರ್ಟ್ ರಾಜ್ ಪಾಲ್ ಯಾದವ್ ಹಾಗೂ ಅವರ ಪತ್ನಿ ಈ ಪ್ರಕರಣದಲ್ಲಿ ಅಪರಾಧಿಗಳು ಎಂದು ತೀರ್ಪು ನೀಡಿ ಶಿಕ್ಷೆಯ ಪ್ರಮಾಣ ಮಾತ್ರ ಎ.23ರಂದು ಪ್ರಕಟಿಸುವುದಾಗಿ ತಿಳಿಸಿತ್ತು.
ಇದೀಗ ಶಿಕ್ಷೆ ಪ್ರಮಾಣ ಪ್ರಕಟವಾಗಿದ್ದು ಇದರ ಪ್ರಕಾರ 1.6 ಕೋಟಿ ರೂ. ದಂಡವನ್ನು ಪಾವತಿಸಬೇಕೆಂದು ಹಾಗು ಆರು ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕೆಂದು ಆದೇಶ ನೀಡಿದೆ. ರಾಜ್ಪಾಲ್ ಪರ ವಕೀಲರು ಜಾಮೀನು ಕೋರಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ನೀಡುವ ಸಾದ್ಯತೆ ಇದೆ ಎಂದು ರಾಜ್ಪಾಲ್ ಪರ ವಕೀಲರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ