ಮುಂಬೈ : ಇತ್ತಿಚೆಗಷ್ಟೇ ಪ್ರಾಣಿ ಹಿಂಸೆಯ ಬಗ್ಗೆ ಧ್ವನಿ ಎತ್ತಿ ಪೆಟಾ ಪ್ರಶಸ್ತಿ ಪಡೆದ ಬಾಲಿವುಡ್ ನಟಿ ಶಿಲ್ಪಾ ಶೇಟ್ಟಿ ಅವರು ಇದೀಗ ತಮ್ಮ ಮುದ್ದಿನ ಬೆಕ್ಕನ್ನು ಹುಡುಕಿಕೊಡಿ ಎಂದು ಸಾಮಾಜಿಕ ಜಾಲತಾಣಗಳ ಮೊರೆ ಹೋಗಿದ್ದಾಳೆ.
ನಟಿ ಶಿಲ್ಪಾ ಶೆಟ್ಟಿ ಅವರ ಸಿಬಾ ಎಂಬ ಮುದ್ದಾದ ಗಂಡು ಬೆಕ್ಕು ಏಪ್ರಿಲ್ 19ರಿಂದ ಕಾಣೆಯಾಗಿದ್ದರಿಂದ ಅದು ಎಲ್ಲಿಯಾದರು ಕಂಡು ಬಂದರೆ ತನಗೆ ತಿಳಿಸಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಹಿಮಾಲಯನ್ ಪರ್ಷಿಯನ್ ತಳಿಯ ನನ್ನ ಮುದ್ದಾದ ಬೆಕ್ಕು ನಿನ್ನೆ(ಏ.19) ಮಧ್ಯಾಹ್ನ 2 ಗಂಟೆಯಿಂದ ಜುಹು ಪ್ರದೇಶದ ನನ್ನ ಮನೆಯಿಂದ ಕಾಣೆಯಾಗಿದೆ. ದಯವಿಟ್ಟು ಹುಡುಕಿ ಕೊಡಿ. ಬೂದುಬಣ್ಣದ ದಟ್ಟ ಕೂದಲು ಇರುವ ನನ್ನ ಬೆಕ್ಕು ನಿಮ್ಮಲ್ಲಿ ಯಾರ ಕಣ್ಣಿಗೆ ಬಿದ್ದರೆ ದಯವಿಟ್ಟು ನನಗೆ ಕರೆ ಮಾಡಿ ಎಂದು ಶಿಲ್ಪಾ ಶೆಟ್ಟಿ ಅವರು ಕೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ