Select Your Language

Notifications

webdunia
webdunia
webdunia
webdunia

ತಮ್ಮ ಉತ್ತಮ ದಾಂಪತ್ಯ ಜೀವನದ ಗುಟ್ಟು ಬಿಚ್ಚಿಟ್ಟ ನಟ ಅಭಿಷೇಕ್ ಬಚ್ಚನ್

ತಮ್ಮ ಉತ್ತಮ ದಾಂಪತ್ಯ ಜೀವನದ ಗುಟ್ಟು ಬಿಚ್ಚಿಟ್ಟ ನಟ ಅಭಿಷೇಕ್ ಬಚ್ಚನ್
ಮುಂಬೈ , ಭಾನುವಾರ, 22 ಏಪ್ರಿಲ್ 2018 (07:05 IST)
ಮುಂಬೈ : ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಅವರ  ದಾಂಪತ್ಯ ಜೀವನಕ್ಕೆ ಎಪ್ರಿಲ್ 20ರಂದು 11 ವರ್ಷ ತುಂಬಿದೆ. ಇಷ್ಟು ವರ್ಷದಲ್ಲಿ ಯಾವುದೇ ರೀತಿಯ ಕಲಹಗಳ  ಬಗ್ಗೆ ಒಂದೇ ಒಂದು ಬಾರಿಯೂ ಸುದ್ದಿಯಾಗದೇ ಆದರ್ಶ ದಂಪತಿಗಳು ಎಂದೇ ಕರೆಸಿಕೊಂಡಿದ್ದಾರೆ.


2007ರ ಎಪ್ರಿಲ್ 20ರಂದು ಅಭಿಶೇಕ್ ಬಚ್ಚನ್ ಅವರ ಜೊತೆ ಸಪ್ತಪದಿ ತುಳಿದು ಬಚ್ಚನ್ ಕುಟುಂಬಕ್ಕೆ ಸೊಸೆಯಾಗಿ ಬಂದ ನಟಿ ಐಶ್ವರ್ಯ ರೈ ಅವರು ಕುಟುಂಬದ ಮರ್ಯಾದೆ ಉಳಿಸಿಕೊಳ್ಳುವ ಕೆಲಸವನ್ನು ಮಾಡುತ್ತಾ ಸಾಗಿದ್ದಾರೆ. ತಮ್ಮ ಮಡದಿಯ ಬಗ್ಗೆ ಸಂದರ್ಶನವೊಂದರಲ್ಲಿ ತಿಳಿಸಿರುವ ನಟ ಅಭಿಷೇಕ್ ಬಚ್ಚನ್ ಅವರು,’  ನಾನು ಐಶ್ವರ್ಯ ಒಬ್ಬ ಅತ್ಯುತ್ತಮ ನಟಿ, ಅತ್ಯಂತ ಚೆಲುವೆ, ಅವಳು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದಾಳೆ ಎಂಬ ಕಾರಣಕ್ಕೆ ನಾನು ಮದುವೆಯಾಗಿಲ್ಲ. ಆಕೆ ಒಬ್ಬ ಉತ್ತಮ ಹ್ಯೂಮನ್ ಬಿಯಿಂಗ್ ಅನ್ನು ವಿವಾಹವಾಗಿದ್ದೇನೆ. ಶೂಟಿಂಗ್ ಮುಗಿಸಿ ಮನೆಗೆ ಬಂದಾಗ ನಾವು ಮೇಕಪ್ ನಲ್ಲಿ ಇರುವುದಿಲ್ಲ. ಇಲ್ಲಿ ಬೇಕಾಗಿರುವುದು ಮನಸ್ಸು, ಮನುಷ್ಯರು ಮಾತ್ರ. ಆಕೆ ಒಬ್ಬ ಉತ್ತಮ ಸ್ನೇಹಿತೆ. ನಮ್ಮಿಬ್ಬರ ನಡುವೆ ಅಂಡರ್ ಸ್ಟಾಡಿಂಗ್ ಚೆನ್ನಾಗಿದೆ ಎಂದಿದ್ದಾರೆ.


ಹಾಗೇ ಐಶ್ವರ್ಯ ರೈ ಅವರು ಕೂಡ ತಮ್ಮ ಹಾಗೂ ಪತಿಯ ನಡುವಿನ ಸ್ನೇಹ ಉತ್ತಮವಾಗಿದೆ. ನಮಗಿಬ್ಬರ ಸಂಬಂಧದಲ್ಲಿ ಸಮಸ್ಯೆ ಎಂಬುದು ಯಾವತ್ತೂ ಆಗಿಲ್ಲ ಎಂದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಡಾ.ರಾಜ್ ಕುಮಾರ್ ಜನ್ಮದಿನದಂದೇ ಸೆಟ್ಟೇರಲಿದೆ ಶಿವಣ್ಣ -ಪುನೀತ್ ಸಿನಿಮಾ