ಮುಂಬೈ : ಮಾಜಿ ವಿಶ್ವ ಸುಂದರಿ ಬಾಲಿವಡ್ ನಟಿ ಸುಶ್ಮಿತಾ ಸೇನ್ ಅವರು ತಮ್ಮ ಮಾಜಿ ಪ್ರಿಯಕರನನ್ನು ನೆನೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿ ಇದೀಗ ಸುದ್ದಿಯಾಗಿದ್ದಾರೆ.
ಒಂದು ಕಾಲದಲ್ಲಿ ವಿಶ್ವ ಸುಂದರಿ ಎಂಬ ಹೆಗ್ಗಳಿಕೆಯ ಕಿರೀಟ ಧರಿಸಿ ಸಾಲು ಸಾಲು ಚಿತ್ರಗಳಲ್ಲಿ ನಟಿಸಿದ ನಟಿ ಸುಶ್ಮಿತಾ ಸೇನ್ ಅವರು ಪೋರ್ಟರಿಕಾ ಮೂಲದ ಗಾಯಕ ರಿಕ್ಕಿ ಮಾರ್ಟಿನ್ ಪ್ರೀತಿಯ ಬಲೆಗೆ ಬಿದ್ದಿದ್ದರು. ರಿಕ್ಕಿಯನ್ನೇ ಸುಶ್ಮಿತಾ ಮದುವೆಯಾಗುತ್ತಾರೆ ಎಂದು ಎಲ್ಲರೂ ಅಂದುಕೊಂಡಿರುವಾಗ ಅವರ ನಡುವೆ ಮನಸ್ತಾಪ ಮೂಡಿ ಇಬ್ಬರೂ ಬೇರೆ ಬೇರೆಯಾದರು.
ಆದರೆ ಇತ್ತೀಚೆಗೆ ಗಿಲ್ವಾನಿಯಾ ರೋಸಾಲಿಯಾ ಎಂಬ ಅಭಿಮಾನಿಯೊಬ್ಬರು, ಸುಶ್ಮಿತಾ ಹಾಗೂ ಮಾರ್ಟಿನ್ ಜತೆಯಾಗಿ ಇರುವ ಫೋಟೋ ಒಂದನ್ನು ಟ್ವೀಟ್ ಮಾಡಿದರು. ಈ ಫೋಟೋವನ್ನು ಸುಶ್ಮಿತಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುತ್ತಾ, "ಚಿರಕಾಲ ಜ್ಞಾಪಕ ಇರುವ ಈ ಫೋಟೋ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ರೋಸಾಲಿಯಾ. ನಾನು ಮೊದಲ ಸಲ ರಿಕ್ಕಿಯನ್ನು ಮೆಕ್ಸಿಕೋದಲ್ಲಿ ಭೇಟಿಯಾದಾಗ ತೆಗೆಸಿಕೊಂಡ ಫೋಟೋ ಇದು. ಆಗ ನನ್ನ ವಯಸ್ಸು 18. ರಿಕ್ಕಿ ವಯಸ್ಸು 22. ಈಗ ನಾನು ಇಬ್ಬರು ಹೆಣ್ಣುಮಕ್ಕಳನ್ನು ದತ್ತು ತೆಗೆದುಕೊಂಡು ಬೆಳೆಸುತ್ತಿದ್ದೇನೆ. ರಿಕ್ಕಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ನಮ್ಮಿಬ್ಬರ ಜೀವನ ಒಂದೇ ರೀತಿ ಇದೆ. ಕ್ರೇಜಿ ಲೈಫ್" ಎಂದು ಬರೆದುಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ