Publish Date: Wed, 18 Apr 2018 (08:06 IST)
Updated Date: Wed, 18 Apr 2018 (08:08 IST)
ಮುಂಬೈ: ರಾಯಲ್ ಚಾಲೆಂಜರ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯಕ್ಕೆ ಮೊದಲು ರೋಹಿತ್ ಶರ್ಮಾ ಒಂದು ಟ್ವೀಟ್ ಮಾಡಿದ್ದರು.
ಆದರೆ ಇದು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಧೋನಿ ಹೊಡೆದ ಇನಿಂಗ್ಸ್ ನೋಡಿ ಮೆಚ್ಚಿ ಬರೆದ ಟ್ವೀಟ್ ಆಗಿತ್ತು. ಅದರಲ್ಲಿ ರೋಹಿತ್ 200 ರ ಕಡಿಮೆ ಟಾರ್ಗೆಟ್ ಎಂದರೆ ಏನೇನೂ ಸಾಲದು ಎಂದು ಈ ಇನಿಂಗ್ಸ್ ನೋಡಿದರೆ ಅನಿಸಿತು. ಏನಿದ್ದರೂ 200 ರ ಮೇಲೆ ಹೊಡೆಯಬೇಕು ಎಂದು ಮುಂಬೈ ನಾಯಕ ರೋಹಿತ್ ಶರ್ಮಾ ಟ್ವೀಟ್ ಮಾಡಿದ್ದರು.
ಅದೇ ಗುರಿಯೊಂದಿಗೆ ಆರ್ ಸಿಬಿ ವಿರುದ್ಧ ಕಣಕ್ಕಿಳಿದ ರೋಹಿತ್ ಅದನ್ನು ಸ್ವತಃ ತಾವೇ ಮಾಡಿ ತೋರಿಸಿದ್ದಾರೆ. 5 ಸಿಕ್ಸರ್ ಗಳೊಂದಿಗೆ 52 ಬಾಲ್ ಗಳಲ್ಲಿ 94 ರನ್ ಚಚ್ಚಿದ ರೋಹಿತ್ ಆರ್ ಸಿಬಿ ಮೊದಲೇ ಎಚ್ಚರಿಕೆ ಕೊಟ್ಟಂತೇ ಆಡಿ ತೋರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.