Select Your Language

Notifications

webdunia
webdunia
webdunia
webdunia

ಪಂದ್ಯದ ನಡುವೆ ಧೋನಿ ಜತೆಗೆ ಯುವರಾಜ್ ಸಿಂಗ್ ನಡೆದುಕೊಂಡ ರೀತಿ ಇದೀಗ ವೈರಲ್!

ಪಂದ್ಯದ ನಡುವೆ ಧೋನಿ ಜತೆಗೆ ಯುವರಾಜ್ ಸಿಂಗ್ ನಡೆದುಕೊಂಡ ರೀತಿ ಇದೀಗ ವೈರಲ್!
ಮೊಹಾಲಿ , ಮಂಗಳವಾರ, 17 ಏಪ್ರಿಲ್ 2018 (09:06 IST)
ಮೊಹಾಲಿ: ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡುವ ಯುವರಾಜ್ ಸಿಂಗ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವ ಧೋನಿ ಟೀಂ ಇಂಡಿಯಾದಲ್ಲಿ ಒಂದು ಕಾಲದಲ್ಲಿ ಅದೆಷ್ಟೋ ದಾಖಲೆಯ ಜತೆಯಾಟವಾಡಿದ ಸ್ನೇಹಿತರು.

ಇದೀಗ ಮೊನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಇವರಿಬ್ಬರೂ ಎದುರಾಳಿಗಳಾದರೂ ಧೋನಿ ಗಾಯಗೊಂಡು ಮೈದಾನದಲ್ಲಿ ಫಿಸಿಯೋ ಬಳಿ ಶುಶ್ರೂಷೆ ಪಡೆಯುತ್ತಿದ್ದಾಗ ಯುವಿ ನಡೆದುಕೊಂಡ ರೀತಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

ಮೈದಾನದಲ್ಲಿ ಮಲಗಿದ್ದ ಧೋನಿಗೆ ಫಿಸಿಯೋ ಬೆನ್ನಿಗೆ ಮಸಾಜ್ ಮಾಡುತ್ತಿದ್ದರೆ, ನಿಂತು ನೋಡುತ್ತಿದ್ದ ಯುವರಾಜ್ ಗೆ ಅದೇನನಿಸಿತೋ ಪಕ್ಕ ಬಂದು ಧೋನಿಗೆ ಸ್ನೇಹದಿಂದ ತಲೆ ಮಸಾಜ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ. ಹಲವರು ಇದನ್ನು ಮೆಚ್ಚಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಡಿಯುತ್ತಿದ್ದ ಧೋನಿಗೆ ಮೂಗು ದಾರ ಹಾಕಿದ ರಹಸ್ಯ ಬಯಲು ಮಾಡಿದ ಕೆಎಲ್ ರಾಹುಲ್