Publish Date: Mon, 16 Apr 2018 (08:59 IST)
Updated Date: Mon, 16 Apr 2018 (09:05 IST)
ಬೆಂಗಳೂರು: ರಾಜಸ್ಥಾನ್ ರಾಯಲ್ಸ್ ವಿರುದ್ಧ ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರು ಹಸಿರು ಬಣ್ಣದ ಜೆರ್ಸಿ ತೊಟ್ಟು ಆಡಿದ್ದರು.
ಆದರೆ ಆರ್ ಸಿಬಿ ಆಟಗಾರರು ತಮ್ಮ ಎಂದಿನ ಕೆಂಪು, ಕಪ್ಪು ಬಣ್ಣದ ಜೆರ್ಸಿ ಬಿಟ್ಟು ನಿನ್ನೆಯ ಪಂದ್ಯಕ್ಕೆ ಮಾತ್ರ ಜೆರ್ಸಿ ತೊಟ್ಟು ಆಡಿದ್ದೇಕೆ ಗೊತ್ತಾ?
2011 ರಿಂದಲೂ ಆರ್ ಸಿಬಿ ಇಂತಹದ್ದೊಂದು ಪರಿಪಾಠವಿಟ್ಟುಕೊಂಡಿದೆ. ಜಾಗತಿಕ ತಾಪಮಾನ ಮತ್ತು ಪರಿಸರದ ಬಗ್ಗೆ ಕಾಳಜಿ ವಹಿಸುವಂತೆ ಸಾರಲು ಆರ್ ಸಿಬಿ ಈ ದಿರಿಸು ತೊಡುತ್ತಿದೆ. ಈ ಮೂಲಕ ಪರಿಸರ ಸಂರಕ್ಷಣೆಯ ಸಂದೇಶ ನೀಡುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.