Publish Date: Sun, 15 Apr 2018 (08:23 IST)
Updated Date: Sun, 15 Apr 2018 (16:13 IST)
ಬೆಂಗಳೂರು: ಮೊನ್ನೆಯಷ್ಟೇ ಕೆಎಲ್ ರಾಹುಲ್ ತವರಿನ ಪ್ರೇಕ್ಷಕರ ಮುಂದೆಯೇ ತವರಿನ ತಂಡದ ವಿರುದ್ಧ ಆಡುವ ಉಭಯ ಸಂಕಟ ಎದುರಿಸಿದ್ದರು. ಇಂದು ಆ ಸಂಕಟ ಕರ್ನಾಟಕದ ಆಲ್ ರೌಂಡರ್ ಕೆ ಗೌತಮ್ ಎದುರಿಸಬೇಕಾಗಿದೆ.
ಗೌತಮ್ ರಾಜಸ್ಥಾನ್ ರಾಯಲ್ಸ್ ತಂಡದ ಪರ ಐಪಿಎಲ್ ಆಡುತ್ತಿದ್ದಾರೆ. ಇಂದು ರಾಜಸ್ಥಾನ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಚಿನ್ನಸ್ವಾಮಿ ಅಂಗಣದಲ್ಲಿ ಪಂದ್ಯ ನಡೆಯುತ್ತಿದ್ದು, ಗೌತಮ್ ತವರಿನಲ್ಲಿಯೇ ಬೇರೆ ತಂಡದ ಪರ ಆಡಬೇಕಾಗಿದೆ.
ಆದರೆ ರಾಹುಲ್ ರಂತೆ ಗೌತಮ್ ಇದುವರೆಗೆ ಬೆಂಗಳೂರು ತಂಡದ ಪರ ಆಡಿರಲಿಲ್ಲ. ಕಳೆದ ಬಾರಿ ಅವರು ಮುಂಬೈ ಇಂಡಿಯನ್ಸ್ ಪರ ಆಡಿದ್ದರು. ಆದರೂ ತವರಿನ ಪ್ರೇಕ್ಷಕರ ಎದುರು ಆಡುವ ಖುಷಿಯಂತೂ ಇದ್ದೇ ಇರುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.