Publish Date: Sun, 15 Apr 2018 (08:18 IST)
Updated Date: Sun, 15 Apr 2018 (16:12 IST)
ಬೆಂಗಳೂರು: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ನಡುವಿನ ಪ್ರೇಮ ಸಂಭಾಷಣೆ ಮೈದಾನದವರೆಗೆ ತಲುಪಿದ್ದು ಇದೇ ಮೊದಲೇನಲ್ಲ. ಇದೀಗ ಮತ್ತೊಮ್ಮೆ ಅವರಿಬ್ಬರ ಸಂಭಾಷಣೆ ವೀಕ್ಷಕರ ಕಣ್ಸೆರೆಯಾಗಿದೆ.
ಚಿನ್ನಸ್ವಾಮಿ ಅಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯದ ಬಳಿಕ ವಿರಾಟ್ ಫೋನ್ ಮೂಲಕ ಪತ್ನಿ ಅನುಷ್ಕಾಗೆ ಕರೆ ಮಾಡಿ ಆ ಕಡೆ ಸಿಗು ಎನ್ನುವಂತೆ ಸನ್ನೆ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಷ್ಟೊಂದು ಸದ್ದು ಗದ್ದಲವಿದ್ದ ಮೈದಾನದಲ್ಲೂ ಕೊಹ್ಲಿ ಗೆಲುವಿನ ಬಳಿಕ ತನಗಾಗಿ ಚಿಯರ್ ಅಪ್ ಮಾಡಲು ಬಂದ ಪತ್ನಿಯನ್ನು ಮರೆಯಲಿಲ್ಲ. ಫೋನ್ ಮೂಲಕ ಪತ್ನಿಗೆ ನಿರ್ದೇಶನ ಕೊಟ್ಟು ಅತ್ತ ಕಡೆ ಬಾ ಎಂದು ಸನ್ನೆ ಮಾಡುತ್ತಿದ್ದುದು ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.