Select Your Language

Notifications

webdunia
webdunia
webdunia
webdunia

ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಗೆ ಪಾತ್ರರಾದ ಬಾಲಿವುಡ್ ದಿವಂಗತ ನಟ ವಿನೋದ್ ಖನ್ನಾ

ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಗೆ ಪಾತ್ರರಾದ ಬಾಲಿವುಡ್ ದಿವಂಗತ ನಟ ವಿನೋದ್ ಖನ್ನಾ
ಮುಂಬೈ , ಶನಿವಾರ, 14 ಏಪ್ರಿಲ್ 2018 (08:01 IST)
ಮುಂಬೈ : ಸಿನಿಮಾರಂಗದಲ್ಲಿ ಸಾಧನೆ ಮಾಡಿದವರಿಗೆ ನೀಡುವ ಅತ್ಯಂತ ಪ್ರತಿಷ್ಟಿತ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಈಗಾಗಲೇ ನಿಧನರಾದ ಬಾಲಿವುಡ್ ನ ಖ್ಯಾತ ನಟರೊಬ್ಬರಿಗೆ ಲಭಿಸಿದೆ.

ದೆಹಲಿಯಲ್ಲಿ ಶುಕ್ರವಾರ(ಇಂದು) 65ನೇ ರಾಷ್ಟ್ರ ಪ್ರಶಸ್ತಿ ಪ್ರಕಟ ಆಗಿದ್ದು ಈ ಸಂದರ್ಭದಲ್ಲಿ ಬಾಲಿವುಡ್ ದಿವಂಗತ ನಟ ವಿನೋದ್ ಖನ್ನಾಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪೋಷಿಸಲಾಗಿದೆ.

 

1946ರ ಅಕ್ಟೋಬರ್ 6ರಂದು ಜನಿಸಿದ್ದ ವಿನೋದ್ ಖನ್ನಾ ಅವರು 1968ರಲ್ಲಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು. 'ಅಮರ್ ಅಕ್ಬರ್ ಅಂಥೋನಿ', 'ಮೇರಾ ಗಾಂವ್ ಮೇರಾ ದೇಶ್', 'ಮೇರೆ ಅಪ್ನೆ', 'ಗದ್ದಾರ್', 'ಮುಖಂದರ್ ಕಾ ಸಿಖಂದರ್' ಹೀಗೆ ಸುಮಾರು 140ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪಿತ್ತಕೋಶ ಕ್ಯಾನ್ಸರ್ ನಿಂದ ಬಳಲುತ್ತಿದ್ದ ನಟ ವಿನೋದ್ ಖನ್ನಾ ಅವರು ಕಳೆದ ವರ್ಷ ಎಪ್ರಿಲ್ ನಲ್ಲಿ ಸರ್ ಹೆಚ್.ಎನ್ ರಿಲಯನ್ಸ್ ಪ್ರತಿಷ್ಠಾನದ ಆಸ್ಪತ್ರೆಯಲ್ಲಿ ತಮ್ಮ70ನೇ ವಯಸ್ಸಿನಲ್ಲಿ ನಿಧನರಾದರು.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 


Share this Story:

Follow Webdunia kannada

ಮುಂದಿನ ಸುದ್ದಿ

ಶಾರುಖ್ ಖಾನ್ ತಮ್ಮ ಕಿರಿಯ ಮಗನ ಬಗ್ಗೆ ಹೇಳಿದ್ದಾದರೂ ಏನು ಗೊತ್ತಾ..?