ಮುಂಬೈ : ಇತ್ತೀಚೆಗೆ ಯಾವಾಗಲೂ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗುತ್ತಿರುವ ಬಾಲಿವುಡ್ ನಟ ಶಾರುಖ್ ಖಾನ್ ಅವರು ಮಗನ ವಿಷಯಕ್ಕೆ ಈಗ ಮತ್ತೆ ಸುದ್ದಿಯಾಗಿದ್ದಾರೆ.
ಐಪಿಎಲ್ ಕೋಲ್ಕತಾ ನೈಟ್‌ರೈಡರ್ಸ್ ತಂಡದ ಸಹ ಮಾಲೀಕರಾಗಿರುವ ಶಾರುಖ್ ಖಾನ್ ಅವರು ಈಡನ್‌ಗಾರ್ಡನ್ಸ್‌ನಲ್ಲಿ ನಡೆದ ಮ್ಯಾಚ್ ವೀಕ್ಷಿಸಲು ಕುಟುಂಬದವರ ಜೊತೆಗೆ ಬಂದಿದ್ದು, ತಮ್ಮ ತಂಡ ಜಯ ಗಳಿಸಿದ್ದನ್ನು ಕಂಡು ಸಂತೋಷಗೊಂಡ ಶಾರುಖ್ ಖಾನ್ ಅವರು ತಮ್ಮ ಮಗಳು ಸುಹಾನಾ, ಕಿರಿಯ ಪುತ್ರ ಅಬ್ರಾಮ್ ಜತೆಗೆ ಮೈದಾನದಲ್ಲಿ ಕುಣಿದಾಡಿದರು.
ನಂತರ ತಮ್ಮ ತಂಡದ ಸದಸ್ಯರಿಗೆ ಅಭಿನಂದಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,’ 'ನನ್ನ ಕಿರಿಯ ಮಗ ಅಬ್ರಾಮ್ ಇನ್ನೂ ಕ್ರಿಕೆಟ್ ಆಡಲು ಆರಂಭಿಸಿಲ್ಲ. ಈಗೀಗ ಸ್ವಲ್ಪ ಫುಟ್‌ಬಾಲ್ ಆಡುತ್ತಿದ್ದಾನೆ. ಅವನನ್ನು ಹಾಕಿ ಪ್ಲೇಯರ್ ಮಾಡುತ್ತೇನೆ. ಅಷ್ಟೇ ಅಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಪ್ರಾತಿನಿಧ್ಯ ವಹಿಸುವಂತೆ ಮಾಡುತ್ತೇನೆ' ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ