Select Your Language

Notifications

webdunia
webdunia
webdunia
webdunia

ನಟ ಇರ್ಫಾನ್ ಖಾನ್ ಆರೋಗ್ಯ ಸ್ಥಿತಿ ಗಂಭೀರ!

ನಟ ಇರ್ಫಾನ್ ಖಾನ್ ಆರೋಗ್ಯ ಸ್ಥಿತಿ ಗಂಭೀರ!
ಮುಂಬೈ , ಗುರುವಾರ, 12 ಏಪ್ರಿಲ್ 2018 (06:44 IST)
ಮುಂಬೈ : ಇತ್ತೀಚೆಗಷ್ಟೇ ಬಾಲಿವುಡ್ ನಟ ಇರ್ಫಾನ್ ಖಾನ್ ಅವರು ಅಪರೂಪದ ಕಾಯಿಲೆ ‘ನ್ಯೂರೋ ಎಂಡೋಕ್ರೈನ್ ಟ್ಯೂಮರ್’ ನಿಂದ ಬಳಲುತ್ತಿರುವ ಹಿನ್ನಲೆಯಲ್ಲಿ ಇದೀಗ ಅವರು ಅಮೇರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ. ಆದರೆ ಈಗ ಅವರ ಆರೋಗ್ಯದ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ.


ಹೌದು. ಅಮೇರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟ ಇರ್ಫಾನ್ ಖಾನ್ ಅವರಲ್ಲಿ ಕಂಡುಬಂದ ಈ ಕಾಯಿಲೆ ಕೊನೆಯ ಹಂತದಲ್ಲಿರುವುದು ಪತ್ತೆಯಾಗಿದೆ. ಅವರು ಬದುಕುಳಿಯುವುದು ಹೆಚ್ಚೆಂದರೆ ಇನ್ನೊಂದು ತಿಂಗಳು' ಎಂದು ಇದೀಗ ಬಾಲಿವುಡ್‌ನ ಸಿನಿಮಾ ವರದಿಗಾರ ಉಮೈರ್‌ ಸಂಧು ಮಾಡಿರುವ ಟ್ವೀಟ್‌ ಎಲ್ಲರಲ್ಲೂ ತೀವ್ರ ಆತಂಕವನ್ನುಂಟುಮಾಡಿದೆ.
ಆದರೆ, ಇರ್ಫಾನ್‌ ಕುಟುಂಬ ವರ್ಗ ಇದುವರೆಗೆ ಅವರ ಆರೋಗ್ಯದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ ಮತ್ತೂ ಯಾರಿಗೂ ಭೇಟಿಯಾಗಲು ಅವಕಾಶ ಕೂಡ ನೀಡಿಲ್ಲ.  


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಚಿತ್ರದ ಶೂಟಿಂಗ್ ವೇಳೆ ನಟಿ ಪಾರುಲ್ ಯಾದವ್ ಮೇಲೆ ಜೇನು ದಾಳಿ