Publish Date: Mon, 09 Apr 2018 (09:00 IST)
Updated Date: Mon, 09 Apr 2018 (09:01 IST)
ಮುಂಬೈ: ವೆಸ್ಟ್ ಇಂಡೀಸ್ ಕ್ರಿಕೆಟಿಗರಾದ ಡ್ವಾನ್ ಬ್ರಾವೊ ಮತ್ತು ಕಿರನ್ ಪೊಲ್ಲಾರ್ಡ್ ಬೇರೆ ಬೇರೆ ತಂಡದಲ್ಲಿ ಆಡುತ್ತಿದ್ದರೂ ಐಪಿಎಲ್ 2018 ರ ಉದ್ಘಾಟನಾ ಪಂದ್ಯದಲ್ಲಿ ಒಂದೇ ನಂ. ನ ಜೆರ್ಸಿ ಹಾಕಿಕೊಂಡು ಕಣಕ್ಕಿಳಿದಿದ್ದರು.
ಬ್ರಾವೋ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದರೆ, ಪೊಲ್ಲಾರ್ಡ್ ಮುಂಬೈ ಇಂಡಿಯನ್ಸ್ ಪರ ಆಡುತ್ತಾರೆ. ಹಾಗಿದ್ದರೂ ಇವರು 400 ನಂ.ನ ಜೆರ್ಸಿ ಹಾಕಿಕೊಂಡಿದ್ದರು. ಅದಕ್ಕೆ ಕಾರಣವನ್ನು ಬ್ರಾವೋ ಬಹಿರಂಗಪಡಿಸಿದ್ದಾರೆ.
‘ಟಿ20 ಪಂದ್ಯಗಳಲ್ಲಿ 400 ಪಂದ್ಯಗಳನ್ನಾಡಿದ ದಾಖಲೆಯನ್ನು ಪೊಲ್ಲಾರ್ಡ್ ಮಾಡಿದರು. ಹಾಗಾಗಿ ಅವರು ಅವರ ಜೆರ್ಸಿ ನಂ. ಮೇಲೆ 400 ಎಂದು ಬರೆಯಿಸಿಕೊಂಡಿದ್ದರು. ನಾನು ಟಿ20 ಪಂದ್ಯಗಳಲ್ಲಿ 400 ವಿಕೆಟ್ ಕಿತ್ತ ಮೊದಲ ಬೌಲರ್ ಎಂಬ ದಾಖಲೆ ಮಾಡಿದ್ದೆ. ಈ ಕಾರಣಕ್ಕೆ ನಾವಿಬ್ಬರೂ 400 ಸಂಖ್ಯೆಯ ಜೆರ್ಸಿ ತೊಡಲು ನಿರ್ಧರಿಸಿದೆವು’ ಎಂದು ಬ್ರಾವೋ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.