Publish Date: Sun, 08 Apr 2018 (08:27 IST)
Updated Date: Sun, 08 Apr 2018 (08:29 IST)
ಮುಂಬೈ: ಐಪಿಎಲ್ 11 ರ ಮೊದಲ ಪಂದ್ಯದಲ್ಲೇ ಅಭಿಮಾನಿಗಳು ರೋಚಕತೆಗೆಸಾಕ್ಷಿಯಾಗಿದ್ದಾರೆ. ಮೊದಲ ಪಂದ್ಯವನ್ನು ಎರಡು ವರ್ಷಗಳ ನಂತರ ಕಣಕ್ಕೆ ಮರಳಿದ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಕೇವಲ 1 ಬಾಲ್ ಇರುವಾಗ 1 ವಿಕೆಟ್ ನಿಂದ ಗೆದ್ದು ಬೀಗಿದೆ.
ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 4 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತ್ತು. ಮುಂಬೈಗೆ ಮಧ್ಯಮ ಕ್ರಮಾಂಕದಲ್ಲಿ ಇಶಾನ್ ಕಿಶನ್ (40) ಮತ್ತು ಸೂರ್ಯಕಾಂತ್ ಯಾದವ್ (43) ರೂಪದಲ್ಲಿ ಆಸರೆ ಸಿಕ್ಕಿತ್ತು. ಕೊನೆಯಲ್ಲಿ ಕೃನಾಲ್ ಪಾಂಡ್ಯ 22 ಬಾಲ್ ಗಳಲ್ಲಿ 41 ರನ್ ಗಳಿಸಿ ಮೊತ್ತ ಉಬ್ಬಲು ನೆರವಾದರು.
ಬಳಿಕ ಬ್ಯಾಟಿಂಗ್ ಆರಂಭಿಸಿದ ಚೆನ್ನೈ ಪರ ಏಕಾಂಗಿಯಾಗಿ ಹೋರಾಡಿದ್ದು ಡ್ವಾನ್ ಬ್ರಾವೋ. ಕೇವಲ 30 ಬಾಲ್ ಗಳಲ್ಲಿ 3 ಬೌಂಡರಿ, 7 ಸಿಕ್ಸರ್ ಗಳ ನೆರವಿನಿಂದ 68 ರನ್ ಸಿಡಿಸಿದರು. ಅವರ ಅಬ್ಬರದಿಂದಾಗಿಯೇ ಚೆನ್ನೈ ಕೊನೆಯ ಎಸೆತ ಬಾಕಿ ಇರುವಾಗ ಗೆಲುವಿನ ನಗೆ ಬೀರಿತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.