Publish Date: Sat, 07 Apr 2018 (06:29 IST)
Updated Date: Sat, 07 Apr 2018 (06:31 IST)
ಕರಾಚಿ: ಅವರಾಗಿಯೇ ಆಹ್ವಾನವಿತ್ತರೂ ಐಪಿಎಲ್ ನಲ್ಲಿ ಆಡಲ್ಲ, ಅದಕ್ಕಿಂತ ದೊಡ್ಡ ಟೂರ್ನಮೆಂಟ್ ಪಾಕಿಸ್ತಾನ ಕ್ರಿಕೆಟ್ ಲೀಗ್ ಎಂದು ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿ ಹೇಳಿಕೊಂಡಿದ್ದಾರೆ.
ಕಾಶ್ಮೀರ ವಿಚಾರದಲ್ಲಿ ವಿವಾದಾತ್ಮಕ ಟ್ವೀಟ್ ಮಾಡಿ ಭಾರತೀಯ ಕ್ರಿಕೆಟಿಗರಿಂದ ಜಾಡಿಸಿಕೊಂಡ ಬಳಿಕ ಅಫ್ರಿದಿ ಈ ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲ, ಮುಂದೊಂದು ದಿನ ಪಾಕ್ ಕ್ರಿಕೆಟ್ ಲೀಗ್, ಐಪಿಎಲ್ ನನ್ನೂ ಮೀರಿಸಲಿದೆ ಎಂದು ಅಫ್ರಿದಿ ಹೊಗಳಿಕೊಂಡಿದ್ದಾರೆ.
ಕಾಶ್ಮೀರ ವಿಚಾರದಲ್ಲಿ ಟ್ವೀಟ್ ಮಾಡಿ ಟೀಕೆಗೊಳಗಾಗಿದ್ದರ ಬಗ್ಗೆ ತಾನು ತಲೆಕೆಡಿಸಿಕೊಂಡಿಲ್ಲ. ನಾನು ಸತ್ಯವನ್ನೇ ಹೇಳಿದ್ದೇನೆ. ನನಗೆ ಪಾಕಿಸ್ತಾನವೇ ದೊಡ್ಡದು. ನನ್ನ ದೇಶದ ಸೈನಿಕ ನಾನು. ಒಂದು ವೇಳೆ ಕ್ರಿಕೆಟಿಗನಾಗದೇ ಇದ್ದಿದ್ದರೆ, ಪಾಕ್ ಯೋಧನಾಗುತ್ತಿದ್ದೆ ಎಂದು ಅಫ್ರಿದಿ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.