Publish Date: Fri, 06 Apr 2018 (10:08 IST)
Updated Date: Fri, 06 Apr 2018 (10:10 IST)
ಮುಂಬೈ: ನಾಳೆ 11 ನೇ ಆವೃತ್ತಿಯ ಐಪಿಎಲ್ ಗೆ ಅದ್ಧೂರಿ ಚಾಲನೆ ಸಿಗಲಿದ್ದು, ತಂಡದ ಸಹ ಆಟಗಾರರಿಗೇ ಚಮಕ್ ಕೊಡಲು ರೋಹಿತ್ ಶರ್ಮಾ ಚಮಕ್ ಕೊಡಲಿದ್ದಾರೆ.
ನಾಳೆ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ತಮ್ಮ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಅಚ್ಚರಿ ನೀಡಲಿದ್ದಾರಂತೆ.
‘ನನ್ನ ಬ್ಯಾಟಿಂಗ್ ಕ್ರಮಾಂಕವನ್ನು ಸರ್ಪ್ರೈಸ್ ಆಗಿ ಇಡಲು ಬಯಸುತ್ತೇನೆ. ನಮ್ಮ ಮಧ್ಯಮ ಕ್ರಮಾಂಕ ಮತ್ತು ಓಪನರ್ ಗಳು ಅದ್ಭುತ ಫಾರ್ಮ್ ನಲ್ಲಿದ್ದಾರೆ. ನಾನು ಯಾವ ಕ್ರಮಾಂಕದಲ್ಲಿರುತ್ತೇನೆಂಬುದು ಸಂಪೂರ್ಣ ಸರ್ಪ್ರೈಸ್ ಆಗಲಿದೆ’ ಎಂದು ರೋಹಿತ್ ಶರ್ಮಾ ಸುಳಿವು ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.