Publish Date: Fri, 06 Apr 2018 (07:17 IST)
Updated Date: Fri, 06 Apr 2018 (07:20 IST)
ಮುಂಬೈ : ಏಫ್ರಿಲ್ 7ರಂದು ನಡೆಯಲಿರುವ ಐಪಿಎಲ್ 11ನೇ ಆವೃತ್ತಿಯ ಗ್ರ್ಯಾಂಡ್ ಓಪನಿಂಗ್ ಕಾರ್ಯಕ್ರಮಕ್ಕೆ ಬಾಲಿವುಡ್ ನ ತಾರೆಯರು ಸ್ಟೇಜ್ ಪರ್ಫಾರ್ಮೆನ್ಸ್ ನೀಡುವುದರ ಮೂಲಕ ಕ್ರಿಕೆಟ್ ಪ್ರಿಯರನ್ನು ರಂಜಿಸಲಿದ್ದಾರೆ.
ಈ ಓಪನಿಂಗ್ ಕಾರ್ಯಕ್ರಮಕ್ಕೆ ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಸ್ಟೇಜ್ ಪರ್ಫಾರ್ಮೆನ್ಸ್ ನೀಡಬೇಕಿತ್ತು. ಆದರೆ ಭುಜದ ನೋವಿನ ಕಾರಣ ಅವರು ಈ ಕಾರ್ಯಕ್ರಮವನ್ನು ಕ್ಯಾನ್ಸಲ್ ಮಾಡಿದ್ದರಿಂದ ಅವರ ಬದಲಿಗೆ ಬಾಲಿವುಡ್ ನಟ ಹೃತಿಕ್ ರೋಷನ್ ಅವರು ಆಯ್ಕೆಯಾಗಿದ್ದಾರೆ.
ಈ ಕಾರ್ಯಕ್ರಮದಲ್ಲಿ 45 ನಿಮಿಷಗಳ ಕಾಲ ಸಿನಿಮಾ ಸೆಲೆಬ್ರಿಟಿಗಳು ಪರ್ಫಾರ್ಮೆನ್ಸ್ ನೀಡಲಿದ್ದು, ಇದೀಗ ಹೃತಿಕ್ ರೋಷನ್ ಅವರ ಜೊತೆಗೆ ವರುಣ್ ಧವನ್, ಪ್ರಣೀತಿ ಚೋಪ್ರಾ ಹಾಗೂ ಜಾಕ್ವೆಲಿನ್ ಫರ್ನಾಡೀಸ್ ಹಾಗೂ ಬಾಹುಬಲಿ ನಟಿ ತಮನ್ನಾ ಅವರು ಕೂಡ ಕುಣಿಯಲಿದ್ದಾರೆ. ಇದಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಸಂಭಾವನೆ ಕೂಡ ಅವರು ಪಡೆಯುತ್ತಿದ್ದಾರಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ