Publish Date: Mon, 16 Apr 2018 (08:29 IST)
Updated Date: Mon, 16 Apr 2018 (08:32 IST)
ಮೊಹಾಲಿ: ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ನಡುವೆ ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ 4 ರನ್ ಗಳಿಂದ ಸೋಲನುಭವಿಸಿದೆ.
ಗೆಲುವಿಗೆ 198 ರನ್ ಗಳ ಬೃಹತ್ ಗುರಿ ಬೆನ್ನತ್ತಿದ ಚೆನ್ನೈ ಕೇವಲ 4 ರನ್ ಗಳ ಹಿನ್ನಡೆ ಅನುಭವಿಸಿ ಸೋಲನುಭವಿಸಿತು. ಅದರಲ್ಲೂ ಧೋನಿ ಇನಿಂಗ್ಸ್ ವಿಶೇಷವಾಗಿತ್ತು. ವಿಪರೀತ ಬೆನ್ನು ನೋವಿದ್ದರೂ ಧೋನಿ ಕೊನೆಯವರೆಗೂ ಹೋರಾಡಿದರು. ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸಿದರಾದರೂ ಕೊನೆಗೂ ಅವರಿಗೆ ಗೆಲುವಿನ ರನ್ ಹೊಡೆಯಲಾಗಲೇ ಇಲ್ಲ. ಅಂತಿಮವಾಗಿ 44 ಎಸೆತಗಳಲ್ಲಿ 99 ರನ್ ಗಳಿಸಿ ಔಟಾಗದೇ ಉಳಿದರು.
ಎಲ್ಲಕ್ಕಿಂತ ಹೆಚ್ಚಾಗಿ ಧೋನಿಗೆ ತೀವ್ರವಾಗಿ ಬೆನ್ನು ನೋವು ಕಾಡಿತ್ತು. ನೋವಿನ ನಡುವೆಯೇ ಆಡಿದ್ದರ ಬಗ್ಗೆ ಪಂದ್ಯದ ನಂತರ ಧೋನಿ ಹೇಳಿಕೊಂಡರು. ‘ನನಗೆ ದೇವರು ಕೈಗೆ ಒಳ್ಳೆ ಶಕ್ತಿ ಕೊಟ್ಟಿದ್ದಾನೆ. ಅದಕ್ಕೇ ಬೆನ್ನಿನ ಮೇಲೆ ಹೆಚ್ಚು ಅವಲಂಬಿಸಬೇಕಾಗಿಲ್ಲ. ನೋವುಗಳು ನನಗೆ ಸಾಮಾನ್ಯ. ಅದರ ಜತೆಗೆ ಆಡುವುದು ನನಗೆ ಅಭ್ಯಾಸವಾಗಿದೆ. ನಾವು ಕಠಿಣವಾಗಬೇಕಿದೆ’ ಎಂದು ಧೋನಿ ಹೇಳಿಕೊಂಡಿದ್ದಾರೆ. ಅಂತಿಮ ಓವರ್ ಗೆ ಮೊದಲು ಫಿಸಿಯೋ ಧೋನಿ ಸಹಾಯಕ್ಕೆ ಮೈದಾನಕ್ಕೆ ಬರಲು ಹೊರಟಿದ್ದರೂ ಅವರನ್ನು ಹೊರಕ್ಕೆ ಕಳುಹಿಸಿ ಆಡಲು ಸಜ್ಜಾದರು. ಧೋನಿಯ ಈ ಸಾಹಸಮಯ ಇನಿಂಗ್ಸ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.