Publish Date: Wed, 18 Apr 2018 (06:29 IST)
Updated Date: Wed, 18 Apr 2018 (06:33 IST)
ಮುಂಬೈ : ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಅವರು ‘ಏ ದಿಲ್ ಹೈ ಮುಷ್ಕಿಲ್’ ಬಳಿಕ ‘ಫೆನ್ನೆ ಖಾನ್’ ಸಿನಿಮಾದಲ್ಲಿ ನಟಿಸುತ್ತಿದ್ದು, ಆದರೆ ಇದೀಗ ಈ ‘ಫೆನ್ನೆ ಖಾನ್’ ಚಿತ್ರತಂಡದಿಂದ ಅವರಿಗೆ ಸಂಕಷ್ಟವೊಂದು ಎದುರಾಗಿದೆ.
ಅದೇನೆಂದರೆ ಈಗಾಗಲೇ ‘ಫೆನ್ನೆ ಖಾನ್’ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಚಿತ್ರತಂಡದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳು ನಮಗೆ ಸಂಬಳ ನೀಡುತ್ತಿಲ್ಲ ಎಂದು ಆರೋಪಿಸಿ ಚಿತ್ರೀಕರಣ ನಿಲ್ಲಿಸಲು ಮುಂದಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಬ್ಯುಸಿ ಶೆಡ್ಯೂಲ್ ನಲ್ಲಿರುವ ಐಶ್ವರ್ಯ ರೈ ಬಚ್ಚನ್ ಅವರು ಈ ಚಿತ್ರಕ್ಕಾಗಿ ಈಗಾಗಲೇ ಡೇಟ್ ನೀಡಿದ್ದು, ಒಂದು ವೇಳೆ ಶೂಟಿಂಗ್ ನಿಂತರೆ ಅವರ ಮುಂದಿನ ಕಾರ್ಯಕ್ರಮಗಳಿಗೆ ಅಡ್ಡಿಯಾಗಲಿದೆ. ಹಾಗೇ ಇವರು ಮತ್ತೊಮ್ಮೆ ಫೆನ್ನೆ ಖಾನ್ ಚಿತ್ರಕ್ಕೆ ಡೇಟ್ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಸದ್ಯ ಐಶ್ವರ್ಯ ರೈ ಪಾತ್ರದ ಚಿತ್ರೀಕರಣ ನಡೆಯುತ್ತಿದ್ದರಿಂದ ಅವರು ಇದೀಗ ಸಂಕಷ್ಟ ಎದುರಿಸಬೇಕಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ