Select Your Language

Notifications

webdunia
webdunia
webdunia
webdunia

ಸೋನಂ ಕಪೂರ್ ಕತುವಾ ಅತ್ಯಾಚಾರ ಘಟನೆ ಬಗ್ಗೆ ಮಾಡಿರುವ ಟ್ವೀಟ್ ಬಗ್ಗೆ ಕೊಯ್ನಾ ಮಿತ್ರಾ ಆಕ್ರೋಶ ವ್ಯಕ್ತಪಡಿಸಿದ್ದೇಕೆ?

ಸೋನಂ ಕಪೂರ್ ಕತುವಾ ಅತ್ಯಾಚಾರ ಘಟನೆ ಬಗ್ಗೆ ಮಾಡಿರುವ ಟ್ವೀಟ್ ಬಗ್ಗೆ ಕೊಯ್ನಾ ಮಿತ್ರಾ ಆಕ್ರೋಶ ವ್ಯಕ್ತಪಡಿಸಿದ್ದೇಕೆ?
ಮುಂಬೈ , ಮಂಗಳವಾರ, 17 ಏಪ್ರಿಲ್ 2018 (16:03 IST)
ಮುಂಬೈ : ಕಥುವಾ ಹಾಗೂ ಉನ್ನಾವ್ ದಲ್ಲಿ ನಡೆದ ಅತ್ಯಾಚಾರ ಘಟನೆಯನ್ನು ಖಂಡಿಸಿ ಬಾಲಿವುಡ್ ನಟಿಯರು  ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ  ಬಾಲಿವುಡ್ ನಟಿ ಸೋನಂ ಕಪೂರ್ ಅವರು ಈ ಘಟನೆ ಬಗ್ಗೆ ಮಾಡಿರುವ ಟ್ವೀಟ್ ಗೆ ನಟಿ ಕೊಯ್ನಾ ಮಿತ್ರಾರು ಆಕ್ರೋಶ ವ್ಯಕ್ತಪಟಿಸಿದ್ದಾರೆ.


ಬಾಲಿವುಡ್ ನಟಿಯರಾದ ಕರೀನಾ ಕಪೂರ್, ಜಾವೇದ್ ಅಖ್ತರ್, ಸ್ವರಾ ಭಾಸ್ಕರ್ ಸೇರಿದಂತೆ ಹಲವರು ಈ ಘಟನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು ನಟಿ ಸೋನಂ ಕಪೂರ್ ಅವರು ‘ದೇವಸ್ಥಾನದಲ್ಲಿ ಇಂತಹ ಕೃತ್ಯ ನಡೆದಿರೋದು ನಿಜಕ್ಕೂ ಅಮಾನವೀಯ. ನಕಲಿ ರಾಷ್ಟ್ರೀಯವಾದಿಗಳು ಮತ್ತು ನಕಲಿ ಹಿಂದುಗಳು ಮಾಡಿರೋ ಈ ಕೃತ್ಯ ನಿಜಕ್ಕೂ ನಾಚಿಕೆಗೇಡು’ ಎಂದು ಪೋಸ್ಟ್ ಮಾಡಿದ್ದರು.


ಆದರೆ ಸೋನಂ ಕಪೂರ್ ಅವರ ಈ ಹೇಳಿಕೆಯ ವಿರುದ್ಧ  ನಟಿ ಕೊಯ್ನಾ ಮಿತ್ರಾ ಅವರು ಕಿಡಿಕಾರಿದ್ದು,’ ಈ ಅಪರಾಧ ಕೃತ್ಯಕ್ಕಾಗಿ ಇಡೀ ಹಿಂದೂ ಧರ್ಮವನ್ನೇ ನಿಂದಿಸುವುದು ಎಷ್ಟು ಸರಿ ಅಂತಾ ಪ್ರಶ್ನಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಕರೀನಾರನ್ನು ಸಾಮಾಜಿಕ ಜಾಲತಾಣದಲ್ಲಿ ನೇಟಿಜನ್ ಟೀಕೆ ಮಾಡಲು ಕಾರಣವೇನು ಗೊತ್ತಾ...?