ಹೈದರಾಬಾದ್ : ಇತ್ತೀಚೆಗೆ ಕಾಸ್ಟಿಂಗ್ ಕೌಚ್ ನಿಲ್ಲಿಸುವಂತೆ ಆಗ್ರಹಿಸಿ ಶ್ರೀರೆಡ್ಡಿ ಮಾಡಿದ ಅರೆಬೆತ್ತಲೆ ಪ್ರತಿಭಟನೆ ಬಗ್ಗೆ ಇದೀಗ ತೆಲುಗು ನಟ ಪವನ್ ಕಲ್ಯಾಣ್ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಜಮ್ಮು ಕಾಶ್ಮೀರದ ಕತುವಾದಲ್ಲಿ 8 ವರ್ಷದ ಬಾಲೆ ಆಸಿಫಾ ಮೇಲೆ ನಡೆದ ಅತ್ಯಾಚಾರವನ್ನು ಖಂಡಿಸಿ ಹೈದರಾಬಾದ್'ನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ತೆಲುಗು ನಟ ಪವನ್ ಕಲ್ಯಾಣ್ ಅವರು ಈ ವೇಳೆ ಕಾಸ್ಟಿಂಗ್ ಕೌಚ್ ವಿರುದ್ಧ ಧ್ವನಿ ಎತ್ತಿ ಫಿಲ್ಮ್ ಚೇಂಬರ್ ಮುಂದೆ ಅರೆ ಬೆತ್ತಲೆ ಪ್ರತಿಭಟನೆ ನಡೆಸಿದ್ದ ಶ್ರೀ ರೆಡ್ಡಿ ಬಗ್ಗೆ ಮಾತನಾಡಿ,’ ನ್ಯಾಯ ಬೇಕಾದಲ್ಲಿ ಕೋರ್ಟ್ ಅಥವಾ ಪೊಲೀಸ್ ಠಾಣೆಗೆ ಹೋಗಲಿ ಅದು ಬಿಟ್ಟು ಟಿವಿ ಚಾನಲ್ ಗಳ ಮುಂದೆ ಹೋಗುವುದಲ್ಲ. ಕೋರ್ಟ್ ನಲ್ಲಿ ಹೋರಾಡುವುದಲ್ಲದೇ ಟಿವಿ ಚಾನಲ್ ಗಳ ಮುಂದೆ ಹೋದರೇ ಯಾವುದೇ ಪ್ರಯೋಜನವಾಗದು’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ