Select Your Language

Notifications

webdunia
webdunia
webdunia
webdunia

ಡಾ.ರಾಜ್ ಕುಮಾರ್ ಜನ್ಮದಿನದಂದೇ ಸೆಟ್ಟೇರಲಿದೆ ಶಿವಣ್ಣ -ಪುನೀತ್ ಸಿನಿಮಾ

ಡಾ.ರಾಜ್ ಕುಮಾರ್ ಜನ್ಮದಿನದಂದೇ ಸೆಟ್ಟೇರಲಿದೆ ಶಿವಣ್ಣ -ಪುನೀತ್ ಸಿನಿಮಾ
ಬೆಂಗಳೂರು , ಭಾನುವಾರ, 22 ಏಪ್ರಿಲ್ 2018 (06:54 IST)
ಬೆಂಗಳೂರು : ಕನ್ನಡಿಗರ ಕಣ್ಮಣಿ ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ  ಜನ್ಮದಿನದಂದೇ ಶಿವರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಅವರ  ಹೊಸ ಸಿನಿಮಾ ಮುಹೂರ್ತ ಕೂಡ ನೆರವೇರಲಿದೆ.


ಹೌದು. ಏಪ್ರಿಲ್ 24 ರಂದು ಡಾ.ರಾಜ್ ಕುಮಾರ್ ಅವರ ಜನ್ಮ ದಿನವಾಗಿರುವ ಹಿನ್ಲೆಲೆಯಲ್ಲಿ ಅವರ ಅಭಿಮಾನಿಗಳು ನೇತ್ರದಾನ ಅನ್ನದಾನ, ರಕ್ತದಾನ ಹೀಗೆ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ. ಜೊತೆಗೆ ಈ ಬಾರಿ ಇನ್ನೊಂದು ವಿಷೇಶವೆನೆಂದರೆ ರಾಜ್ ಕುಮಾರ್ ಅವರ ಮಕ್ಕಳಾದ ಶಿವರಾಜ್ ಕುಮಾರ್ ಅವರು ಅಭಿನಯಿಸಲಿರುವ ನಿರ್ದೇಶಕ ರವಿವರ್ಮ ನಿರ್ದೇಶಿಸಲಿರುವ 'ರುಸ್ತುಂ' ಚಿತ್ರ ಹಾಗೂ ರಾಜಕುಮಾರ ಚಿತ್ರಕ್ಕೆ ಆಯಕ್ಷನ್ ಕಟ್ ಹೇಳಿದ್ದ ನಿರ್ದೇಶಕ ಸಂತೋಷ್ ಆನಂದ್‍ ರಾಮ್ ಈಗ ಮತ್ತೆ ಪುನೀತ್ ರಾಜ್ ಕುಮಾರ್ ಅವರ ಜೊತೆಗೆ ಸಿನಿಮಾ ಮಾಡಲಿದ್ದು, ಈ ಹೊಸ ಸಿನಿಮಾ ಕೂಡ ಅಂದೇ ಸೆಟ್ಟೇರಲಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡದ ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ತಂದೆ ನಿಧನ