ಬೆಂಗಳೂರು : ಪ್ರತಿಯೊಂದು ಲೋಹವೂ ತನ್ನದೆ ವಿಶೇಷತೆ ಹೊಂದಿದೆ. ಗ್ರಹ ದೋಷದ ಜೊತೆ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಗುಣಪಡಿಸುವ ಗುಣ ಲೋಹಗಳಲ್ಲಿದೆ. ಚಮತ್ಕಾರಿ ಲೋಹದಲ್ಲಿ ತಾಮ್ರಕೂಡ ಒಂದು. ತಾಮ್ರದ ಉಂಗುರ ಧರಿಸುವುದ್ರಿಂದ ಸೂರ್ಯ ಮತ್ತು ಮಂಗಳ ಗ್ರಹ ಶಾಂತವಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಲೋಹ ಹಾಗೂ ಗ್ರಹಗಳ ನಡುವೆ ಸಂಬಂಧವಿದೆ. ಗ್ರಹ ದೋಷ ಸ್ಥಾನದಲ್ಲಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಶುಭ-ಅಶುಭಕ್ಕೆ ಕೂಡ ಈ ಗ್ರಹಗಳು ಕಾರಣ. ತಾಮ್ರದ ಲೋಹವನ್ನು ಶಾಂತವಾದ ಧಾತು ಎಂಬು ಪರಿಗಣಿಸಲಾಗಿದೆ. ಮೇಲೆ ಹೇಳಿದಂತೆ ಸೂರ್ಯ ಹಾಗೂ ಮಂಗಳ ದೋಷವಿದ್ದವರು ತಾಮ್ರದ ಉಂಗುರ ಧರಿಸಬೇಕು. ಶೀಘ್ರದಲ್ಲಿಯೇ ಫಲಿತಾಂಶ ಕಾಣಬಹುದು.
ತಾಮ್ರದ ಉಂಗುರ ಧರಿಸುವುದ್ರಿಂದ ಸಮಾಜದಲ್ಲಿ ಸ್ಥಾನ, ಗೌರವ ಲಭಿಸುತ್ತದೆ. ಮನುಷ್ಯನ ಖ್ಯಾತಿ ಹೆಚ್ಚಾಗುತ್ತದೆ.
ತಾಮ್ರ ಶಾಂತ ಲೋಹವಾಗಿರುವುದ್ರಿಂದ ದೇಹದ ಉಷ್ಣತೆಯನ್ನು ಇದು ಕಡಿಮೆ ಮಾಡುತ್ತದೆ. ಮನಸ್ಸು ಕೂಡ ಶಾಂತವಾಗಿರುತ್ತದೆ. ಹೆಚ್ಚು ಕೋಪಿಷ್ಠರು ತಾಮ್ರದ ಉಂಗುರವನ್ನು ಧರಿಸಬೇಕು. ಮನೆಯಲ್ಲಿ ತಾಮ್ರದ ಪಾತ್ರೆಯಿದ್ದರೆ ಒಳ್ಳೆಯದು. ಮನೆಯಲ್ಲಿ ಶಾಂತಿ ನೆಲೆಸುವ ಜೊತೆಗೆ ನಕಾರಾತ್ಮಕ ಶಕ್ತಿ ಪ್ರಭಾವ ಕಡಿಮೆಯಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ