Publish Date: Sat, 21 Apr 2018 (06:02 IST)
Updated Date: Sat, 21 Apr 2018 (06:05 IST)
ಬೆಂಗಳೂರು : ರಾಜ್ಯ ವಿಧಾನ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಸಿನಿಮಾ ತಾರೆಯರು ಕೂಡ ತಮಗಿಷ್ಟವಾದ ರಾಜಕೀಯ ಪಕ್ಷಗಳ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಇದೀಗ ಸ್ಯಾಂಡಲ್ ವುಡ್ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಕೂಡ ತಮಗಿಷ್ಟವಾದ ರಾಜಕೀಯ ಪಕ್ಷವೊಂದರ ಪರ ಪ್ರಚಾರ ಮಾಡಿದ್ದಾರೆ.
ಹೌದು. ನಟಿ ರಚಿತಾ ರಾಮ್ ಅವರು ಜೆಡಿಎಸ್ ಪಕ್ಷದ ಪರವಾಗಿ ಮತಯಾಚನೆ ಮಾಡಿದ್ದಾರೆ. ವಿಡಿಯೋ
ವೊಂದರ ಮೂಲಕ ರೈತ ನಾಯಕ ಕುಮಾರಸ್ವಾಮಿ ಅವರಿಗೆ ನಿಮ್ಮ ಮತ ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿದ್ದಾರೆ. ಸಿಕ್ಕ ಹತ್ತು ತಿಂಗಳಲ್ಲಿ ರೈತರ ಪರ ಕಾಳಜಿ ವಹಿಸಿರುವ ರಾಜಕೀಯ ವ್ಯಕ್ತಿ ಎಂದರೆ ಕುಮಾರಣ್ಣ. ಹಾಗಾಗಿ ತಪ್ಪದೆ ಅವರಿಗೆ ನಿಮ್ಮ ಮತ ನೀಡಿ ಗೆಲ್ಲಿಸಿ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ