Publish Date: Fri, 20 Apr 2018 (16:19 IST)
Updated Date: Fri, 20 Apr 2018 (16:25 IST)
ಬೆಂಗಳೂರು : ಎಲ್ಲಾ ಜನನಾಯಕರು ಪ್ರಚಾರ ಕಾರ್ಯದಲ್ಲಿ ಬ್ಯೂಸಿಯಾಗಿರುವಾಗ ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಶಿಲ್ಪಾ ಗಣೇಶ್ ಅವರು ಮಾತ್ರ ವಿದೇಶ ಪ್ರಯಾಣಕ್ಕೆ ತೆರಳಿದ್ದಾರೆ.
ಶಿಲ್ಪಾ ಗಣೇಶ್ ಅವರು ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಟಿಕೆಟ್ ಸಿಗುತ್ತೆ ಅನ್ನೋ ಭರವಸೆಯಿಂದ ಆರ್.ಆರ್. ನಗರದಲ್ಲಿ ಓಡಾಡಿಕೊಂಡಿದ್ದರು. ಆದ್ರೆ ಆರ್.ಆರ್. ನಗರದ ಬಿಜೆಪಿ ಟಿಕೆಟ್ ಪಿ.ಎಂ. ಮುನಿರಾಜು ಗೌಡರಿಗೆ ದೊರಕಿದೆ. ಇದರಿಂದ ಬೇಸರಗೊಂಡ ಶಿಲ್ಪಾ ಗಣೇಶ್ ಅವರು ಚುನಾವಣೆಯ ಈ ಸಂದರ್ಭದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗದೆ ತಮ್ಮ ಮಕ್ಕಳೊಟ್ಟಿಗೆ ರಜೆಯನ್ನು ಕಳೆಯಲು ದುಬೈಗೆ ಪ್ರಯಾಣ ಬೆಳೆಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ