Publish Date: Fri, 20 Apr 2018 (16:15 IST)
Updated Date: Fri, 20 Apr 2018 (16:17 IST)
ಬೆಂಗಳೂರು : ಬಾಡಿಗೆ ಮನೆ ವಿವಾದದಲ್ಲಿ ನಟ ಯಶ್ ಅವರ ವಿರುದ್ಧ ಅನೇಕರು ಆರೋಪ ಮಾಡಿದ್ದ ಹಿನ್ನಲೆಯಲ್ಲಿ ಇದೀಗ ಒಳ್ಳೆ ಹುಡುಗ ಪ್ರಥಮ್ ಅವರು ಯಶ್ ಅವರ ಬೆಂಬಲಕ್ಕೆ ನಿಂತಿದ್ದಾರೆ.
ನಟ ಯಶ್ ಅವರು ತಾವು ಹಿಂದೆ ವಾಸವಾಗಿದ್ದ ಬಾಡಿಗೆ ಮನೆಯ ಮಾಲೀಕರಿಗೆ ಹಣ ನೀಡಿಲ್ಲವೆಂದು ಆತ ದೂರು ನೀಡಿದ್ದು, ನಂತರ ವಿಚಾರಣೆ ನಡೆಸಿದ ಕೋರ್ಟ್ 3 ತಿಂಗಳೊಳಗೆ ಬಾಕಿ ಹಣ ನೀಡಿ ಮನೆ ಖಾಲಿ ಮಾಡುವಂತೆ ಯಶ್ ಅವರಿಗೆ ಆದೇಶ ನೀಡಿದೆ. ಈ ಹಿನ್ನಲೆಯಲ್ಲಿ ಯಶ್ ಅವರ ಬಗ್ಗೆ ಅನೇಕರು ಬಾಯಿಗೆ ಬಂದ ಹಾಗೇ ಮಾತನಾಡಿದ್ದರು, ಇದಕ್ಕೆಲ್ಲಾ ಯಶ್ ಫೇಸ್ ಬುಕ್ ಲೈವ್ ಮೂಲಕ ಸ್ಪಷ್ಟನೆ ನೀಡಿದ್ದರು.
ಇದನ್ನು ಕೇಳಿದ ಪ್ರಥಮ್ ಅವರು ತಮ್ಮ ಫೇಸ್ ಬುಕ್ ನಲ್ಲಿ,’ ಬೆಂಗಳೂರಿನ ಪ್ರತಿಷ್ಟಿತ ಹೋಟೆಲ್ ಒಂದರಲ್ಲಿ 2 ವರ್ಷದಿಂದ ಯಶ್ ರವರ ಒಂದು ರೂಮ್ ಇದೆ. ಅದರ ತಿಂಗಳ ಬಾಡಿಗೆಯೇ 6 ಲಕ್ಷಕ್ಕೂ ಹೆಚ್ಚು. ಆ ಹೋಟೆಲ್ ನಲ್ಲಿ ಯಶ್ ಯಾಕೆ ರೂಮ್ ಮಾಡಿದ್ದಾರೆ ಗೊತ್ತಾ.? ಸಿನಿಮಾದವರು ಬಂದರೆ ಕೂಡಿಸಿ ಮಾತಾಡೋಕೆ, ಹೊಸಬರನ್ನ ಪ್ರೋತ್ಸಾಹಿಸೋಕೆ, ತನ್ನ ಆಪ್ತ ಸ್ನೇಹಿತರ ಜೊತೆ ಕ್ರಿಕೆಟ್ ಆಡೋಕೆ. 6 ಲಕ್ಷ ಬರಿ ಹೊಸಬರನ್ನ ಪ್ರೋತ್ಸಾಹಿಸೋಕೆ ಬಾಡಿಗೆ ಕಟ್ಟೋ ಯಶ್, ತನ್ನ ಮನೆಗೆ ಬಾಡಿಗೆ ಕಟ್ಟೋಕೆ ದುಡ್ಡಿಲ್ಲ. ಇದನ್ನ ಜನ ನಂಬಬೇಕು. ಒಂದು ಚಿತ್ರಕ್ಕೆ ಯಶ್ ಗೆ ಬರುವ ಸಂಭಾವನೆಯಲ್ಲಿ ಎರಡು ಮನೆ ಕೊಂಡುಕೊಳ್ಳಬಹುದು. ಅಂಥದ್ರಲ್ಲಿ ಮನೆ ಬಾಡಿಗೆ ಕೊಡೋಕೆ ದುಡ್ಡಿಲ್ಲ ಎಂಬ ಆಪಾದನೆ ಇದೆ. ಯಶ್ ಒಳ್ಳೆಯ ಮನುಷ್ಯ. ದಯವಿಟ್ಟು ಕಾಲೆಳೆಯಬೇಡಿ ಎಂದು ಪೋಸ್ಟ್ ಮಾಡಿ ಮನವಿ ಮಾಡಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ