Publish Date: Thu, 19 Apr 2018 (07:35 IST)
Updated Date: Thu, 19 Apr 2018 (07:38 IST)
ಬೆಂಗಳೂರು: ಕಳೆದ ಐಪಿಎಲ್ ಆವೃತ್ತಿಗೂ ಈ ಐಪಿಎಲ್ ಆವೃತ್ತಿಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರದರ್ಶನದಲ್ಲಿ ಅಂತಹ ವ್ಯತ್ಯಾಸವೇನೂ ಕಾಣುತ್ತಿಲ್ಲ.
ಗೆಲ್ಲಿಸಬಲ್ಲ ಆಟಗಾರರಿದ್ದೂ ತಂಡಕ್ಕೆ ಅದೃಷ್ಟ ಮಾತ್ರ ಕೈ ಹಿಡಿಯುತ್ತಿಲ್ಲ. ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್ ರಂತಹ ಚೇಸಿಂಗ್ ವೀರರಿದ್ದೂ ತಂಡಕ್ಕೆ ಮೊತ್ತ ಬೆನ್ನತ್ತಲು ಸಾಧ್ಯವಾಗುತ್ತಿಲ್ಲ. ದುರಾದೃಷ್ಟವೆಂದರೆ ಬೌಲರ್ ಗಳೂ ಬ್ರೇಕ್ ಥ್ರೂ ಒದಗಿಸಲು ವಿಫಲರಾಗುತ್ತಿದ್ದಾರೆ.
ಇದರಿಂದಾಗಿ ಅಂಕ ಪಟ್ಟಿಯಲ್ಲಿ ಬೆಂಗಳೂರು 7 ನೇ ಸ್ಥಾನಕ್ಕೆ ಜಾರಿದೆ. ಕಳೆದ ಆವೃತ್ತಿಯಲ್ಲೂ ಅಂತಿಮ ತಂಡವಾಗಿ ಬೆಂಗಳೂರು ಪಟ್ಟಿಯಲ್ಲಿ ಸ್ಥಾನ ಪಡೆದಿತ್ತು. ಇದುವರೆಗೆ ಕೊನೆಯ ಸ್ಥಾನದಲ್ಲಿದ್ದ ಮುಂಬೈ ಇಂಡಿಯನ್ಸ್ ಬೆಂಗಳೂರನ್ನು ಸೋಲಿಸಿದ ಮೇಲೆ 6 ನೇ ಸ್ಥಾನಕ್ಕೆ ಏರಿದೆ. ಮುಂದಿನ ಪಂದ್ಯಗಳಲ್ಲಿ ಆಟ ಸುಧಾರಿಸಿದಿದ್ದರೆ ಕಳೆದ ಆವೃತ್ತಿಗೂ ಈ ಆವೃತ್ತಿಗೂ ವ್ಯತ್ಯಾಸವೇ ಇರದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.