Publish Date: Sun, 22 Apr 2018 (06:40 IST)
Updated Date: Sun, 22 Apr 2018 (06:43 IST)
ಬೆಂಗಳೂರು : ಕನ್ನಡದ ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಅವರ ತಂದೆ ಕೃಷ್ಣಮೂರ್ತಿ ಅವರು ಶನಿವಾರ (ಏಪ್ರಿಲ್ 21) ಬೆಳಿಗ್ಗೆ ನಿಧನರಾಗಿದ್ದಾರೆ.
ಈ ವಿಷಯವನ್ನು ಕನ್ನಡದ ಖ್ಯಾತ ಗಾಯಕಿ ಶಮಿತಾ ಮಲ್ನಾಡ್ ಅವರು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಹಂಚಿಕೊಳ್ಳುವುದರ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ. ಕೃಷ್ಣ ಮೂರ್ತಿ ಅವರು ತಮ್ಮ ಪತ್ನಿ ಮೀರಾ ಹಾಗೂ ತಮ್ಮಿಬ್ಬರು ಮಕ್ಕಳಾದ ಗಾಯಕ ರಾಜೇಶ್ ಕೃಷ್ಣನ್ ಮತ್ತು ಸಜಾತ ಅವರನ್ನು ಅಗಲಿದ್ದಾರೆ. ಈ ವಿಷ್ಯ ತಿಳಿದ ಅಭಿಮಾನಿಗಳು ಕೂಡ ರಾಜೇಶ್ ಕೃಷ್ಣನ್ ಅವರ ತಂದೆಯ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ