ದೀಪಿಕಾ-ಕತ್ರಿನಾ ಕೋಳಿ ಜಗಳಕ್ಕೆ ಅಂತ್ಯ ಹಾಡಿದವರು ಯಾರು ಗೊತ್ತೇ?

ಬುಧವಾರ, 2 ಜನವರಿ 2019 (09:35 IST)
ಮುಂಬೈ: ಬಾಲಿವುಡ್ ನ ಹಾಟೆಸ್ಟ್ ತಾರೆಯರಾದ ಕತ್ರಿನಾ ಕೈಫ್ ಮತ್ತು ದೀಪಿಕಾ ಪಡುಕೋಣೆ ತಮ್ಮ ಹಳೆಯ ವೈಷಮ್ಯ, ಕೋಳಿ ಜಗಳ ಮರೆತು ಈಗ ಒಂದಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಇವರಿಬ್ಬರ ನಡುವೆ ಸಂಧಾನ ನಡೆಸಿದವರು ಯಾರು ಗೊತ್ತೇ?


ಇಬ್ಬರೂ ಬಾಯ್ ಫ್ರೆಂಡ್ ವಿಚಾರಕ್ಕೆ ಶೀತಲ ಸಮರ ಸಾರಿದ್ದರು. ಬಳಿಕ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗಲ್ಲ ಎನ್ನುವ ಪರಿಸ್ಥಿತಿ ಇತ್ತು. ಆದರೆ ಇದೀಗ ದೀಪಿಕಾ ಆರತಕ್ಷತೆಗೆ ಕತ್ರಿನಾ ಹಾಜರಾಗಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದರು. ಬಳಿಕ ದೀಪಿಕಾ ಕೂಡಾ ಸಂದರ್ಶನವೊಂದರಲ್ಲಿ ಕತ್ರಿನಾ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದರು.

ಇವರಿಬ್ಬರ ನಡುವೆ ಮತ್ತೆ ಫ್ರೆಂಡ್ ಶಿಪ್ ಮೂಡುವಂತೆ ಮಾಡಿದ್ದು ದೀಪಿಕಾ ಪತಿ ರಣವೀರ್ ಸಿಂಗ್ ಅಂತೆ. ರಣವೀರ್ ಇಬ್ಬರ ನಡುವಿನ ಶೀತಲ ಸಮರಕ್ಕೆ ಅಂತ್ಯ ಹಾಡಲು ಸಂಧಾನ ನಡೆಸಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ರಣವೀರ್ ಮಾತಿಗೆ ಬೆಲೆ ಕೊಟ್ಟು ಇಬ್ಬರೂ ಈಗ ಒಂದಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಹೊಸ ವರ್ಷ ತಿರುಪತಿಗೆ ಭೇಟಿ ನೀಡಿದ ಸುದೀಪ್: ಕಿಚ್ಚನ ಕಡೆಯಿಂದ ಈ ತಿಂಗಳು ಇನ್ನೊಂದು ಸ್ಪೆಷಲ್ ಸುದ್ದಿ ಇದೆ!