ಮಿಸೆಸ್ ದೀಪಿಕಾ ಪಡುಕೋಣೆ ಇನ್ಮುಂದೆ ಕಿಸ್ ಮಾಡಲ್ವಾ?!

ಭಾನುವಾರ, 16 ಡಿಸೆಂಬರ್ 2018 (08:55 IST)
ಮುಂಬೈ: ಮದುವೆಯಾದ ಮೇಲೆ ಎಲ್ಲರೂ ಬೋಲ್ಡ್ ಸೀನ್ ಗಳಲ್ಲಿ ಕಾಣಿಸಿಕೊಳ್ಳುವ ಬೋಲ್ಡ್ ನೆಸ್ ತೋರಿಸಲ್ಲ. ಆದರೆ ದೀಪಿಕಾ ಪಡುಕೋಣೆ ಈ ವಿಚಾರದಲ್ಲಿ ಹೇಗಿರುತ್ತಾರೆ?


ಸಂದರ್ಶನವೊಂದರಲ್ಲಿ ದೀಪಿಕಾಗೆ ಸಂದರ್ಶಕರು ಮದುವೆ ಆಯ್ತಲ್ವಾ? ಇನ್ಮುಂದೆ ತೆರೆ ಮೇಲೆ ಕಿಸ್ ಸೀನ್ ಗಳಲ್ಲಿ ಕಾಣಿಸಿಕೊಳ್ಳಲ್ವಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ದೀಪಿಕಾ ‘ಛೀ..’ ಎಂದಷ್ಟೇ ಹೇಳಿದ್ದು, ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಪ್ರತಿಕ್ರಿಯಿಸಿದ್ದಾರೆ.

ಆದರೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ರಣವೀರ್ ಸಿಂಗ್ ತಾವು ಮತ್ತು ದೀಪಿಕಾ ಇಬ್ಬರೂ ಮದುವೆಗಿಂತ ಮೊದಲು ಹೇಗಿದ್ದೆವೋ ಹಾಗೇ ಇರುತ್ತೇವೆ. ನಮ್ಮನ್ನು ನಾವು ಬದಲಾಯಿಸಿಕೊಳ್ಳಲ್ಲ ಎಂದಿದ್ದರು.

ಅಷ್ಟೇ ಅಲ್ಲ, ಸಂದರ್ಶನದಲ್ಲಿ ಇದುವರೆಗೆ ಹನಿಮೂನ್ ಪ್ಲ್ಯಾನ್ ಮಾಡದಿರುವ ಬಗ್ಗೆ ದೀಪಿಕಾಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಮೊದಲು ರಣವೀರ್ ಸಿಂಗ್ ಸಿನಿಮಾ ರಿಲೀಸ್ ಆಗಲಿ. ಆ ಬಳಿಕವೇ ಹನಿಮೂನ್, ಬರ್ತ್ ಡೇ ಎಲ್ಲವನ್ನೂ ಸೆಲೆಬ್ರೇಟ್ ಮಾಡುವ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಹೊಸ ಕಾರು, ಹಳೇ ಫ್ರೆಂಡ್ಸ್ ಜತೆ ಶಿವರಾಜ್ ಕುಮಾರ್ ಜಾಲಿ ಡೇಯ್ಸ್!