Daily Horoscope

Select Your Language

Notifications

webdunia
webdunia
webdunia
webdunia

ವೇದಿಕೆ ಮೇಲೆ ವಿರಾಟ್ ಪತ್ನಿ ಅನುಷ್ಕಾಗೆ ಇದೇನು ಮಾಡಿಬಿಟ್ಟರು ಶಾರುಖ್ ಖಾನ್!

ಅನುಷ್ಕಾ ಶರ್ಮಾ
ನವದೆಹಲಿ: ಅನುಷ್ಕಾ ಶರ್ಮಾ ಇದೀಗ ಆಸ್ಟ್ರೇಲಿಯಾದಲ್ಲಿದ್ದು, ಸ್ವಾಮಿ ಕಾರ್ಯ, ಸ್ವಕಾರ್ಯ ಎರಡನ್ನೂ ಮಾಡುತ್ತಿದ್ದಾರೆ. ವಿರಾಟ್ ಜತೆಗೆ ಮೊದಲ ವಿವಾಹ ವಾರ್ಷಿಕೋತ್ಸವ ಆಚರಿಸಲು ತೆರಳಿರುವ ಅನುಷ್ಕಾ ಅದರ ಜತೆಗೆ ಶಾರುಖ್ ಖಾನ್ ಜತೆಗೆ ತಾವು ಅಭಿನಯಿಸಿದ ಜೀರೋ ಚಿತ್ರದ ಪ್ರಚಾರ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದಾರೆ.


ಇದೇ ವೇಳೆ ಅಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಪತ್ರಕರ್ತರೊಬ್ಬರು ಕ್ರಿಕೆಟ್ ಕುರಿತು ಪ್ರಶ್ನೆ ಕೇಳಿದಾಗ ಶಾರುಖ್ ನೀಡಿದ ಉತ್ತರ ಅನುಷ್ಕಾಗೆ ಮುಜುಗರವುಂಟುಮಾಡಿದೆ.

ಜೀರೋ ಸಿನಿಮಾದ ಪ್ರಚಾರಕ್ಕೆ ಯಾರಾದರೂ ಸೊನ್ನೆಗೆ ಔಟಾದ ಕ್ರಿಕೆಟಿಗನನ್ನು ಬಳಸುತ್ತೀರಾ? ಎಂದು ಶಾರುಖ್ ಗೆ ಪತ್ರಕರ್ತರು ಪ್ರಶ್ನಿಸಿದ್ದಾರೆ. ಇದಕ್ಕೆ ಕೊಂಚ ಸಿಟ್ಟಿಗೆದ್ದ ಶಾರುಖ್ ‘ನನ್ನ ಪಕ್ಕದಲ್ಲಿ ಕುಳಿತಿರುವ ಇವರ ಎದುರು ಕ್ರಿಕೆಟ್ ಬಗ್ಗೆ ಮಾತನಾಡುವುದು ಸರಿಯಲ್ಲ. ಹಾಗೆ ಮಾಡಿದರೆ ಅವರಿಗೆ ಕಪಾಳಮೋಕ್ಷ ಮಾಡಿದಂತೆ ಆಗುತ್ತದೆ. ನಾನು ಯಾರ ಜತೆಗೆ ಕುಳಿತಿದ್ದೇನೆ ಎಂಬುದು ಗೊತ್ತಿದ್ದೂ ಈ ಪ್ರಶ್ನೆ ಕೇಳಲು ನಿಮಗೆ ನಾಚಿಕೆಯಾಗಲ್ವಾ? ಅವರು ಮಿಸೆಸ್ ಕ್ರಿಕೆಟರ್ ಎಂಬುದು ನೆನಪಿರಲಿ. ಹತ್ತಿರದಲ್ಲಿ ಅವರಿರುವಾಗ ನಾನು ಕ್ರಿಕೆಟ್ ಬಗ್ಗೆ ಮಾತನಾಡಲ್ಲ’ ಎಂದು ಶಾರುಖ್ ಅನುಷ್ಕಾರನ್ನು ತೋರಿಸುತ್ತಾ ಹೇಳಿದ್ದಾರೆ. ಇದು ಅನುಷ್ಕಾಗೆ ಕೊಂಚ ಮುಜುಗರವುಂಟು ಮಾಡಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾಂಡಲ್ ವುಡ್ ನ ಹಾಟ್ ಜೋಡಿ ದಿಗಂತ್-ಐಂದ್ರಿತಾ ಮದುವೆ ಇಂದು