Publish Date: Sun, 02 Dec 2018 (07:41 IST)
Updated Date: Sun, 02 Dec 2018 (07:44 IST)
ಮುಂಬೈ : ನವೆಂಬರ್ 14ರಂದು ಬಾಲಿವುಡ್ ಕ್ಯೂಟ್ ಕಪಲ್ ದೀಪಿಕಾ ಪಡುಕೋಣೆ ಮತ್ತು ರಣ್‍ವೀರ್ ಸಿಂಗ್ ಮದುವೆಯಾಗಿದ್ದು, ಆದರೆ ಅವರ ಮದುವೆಯನ್ನು ಅಸಿಂಧು ಎನ್ನಲಾಗಿದೆ.
ಹೌದು. ದೀಪಿಕಾ- ರಣ್‍ವೀರ್ ಮದ್ವೆಯನ್ನು ಕುಟುಂಬಸ್ಥರು ರಿಜಿಸ್ಟರ್ ಮಾಡಿಸಲು ಮುಂದಾಗಿದ್ದಾರೆ. ಆದರೆ ಇವರು ಇಟಲಿಯಲ್ಲಿ ಮದುವೆಯಾದ ಕಾರಣ ಇಬ್ಬರ ಮದ್ವೆ ಭಾರತದ ಕಾನೂನಿನ ಅನ್ವಯ ಸಿಂಧೂವಾಗುವುದಿಲ್ಲ ಎನ್ನಲಾಗುತ್ತಿದೆ.
ಹೇಮಂತ್ ಕುಮಾರ್ ಭಾರತದ ರಾಯಭಾರಿ ಕಚೇರಿಗೆ ದೀಪಿಕಾ ರಣವೀರ್ ಮದುವೆ ಕುರಿತಾಗಿ ಆರ್.ಟಿ.ಐ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಉತ್ತರ ನೀಡಿರುವ ರಾಯಭಾರಿ ಕಚೇರಿ ಇಬ್ಬರು ಮದ್ವೆಗೆ ಸಂಬಂಧಪಟ್ಟಂತೆ ಯಾವುದೇ ಕಾನೂನು ಪರಿಪಾಲಿಸಿಲ್ಲ ಎಂಬುದಾಗಿ ತಿಳಿಸಿದೆ. ಈ ಹಿನ್ನಲೆಯಲ್ಲಿ ಭಾರತದ ಯಾವುದೇ ರಾಜ್ಯದಲ್ಲಿ ಇಬ್ಬರ ಮದುವೆ ಸಿಂಧೂವಾಗುವುದಿಲ್ಲ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.