Select Your Language

Notifications

webdunia
webdunia
webdunia
webdunia

ಹಸೆಮಣೆ ಏರಲು ರೆಡಿಯಾದ ನಟಿ ರಾಖಿ ಸಾವಂತ್

ಹಸೆಮಣೆ ಏರಲು ರೆಡಿಯಾದ ನಟಿ ರಾಖಿ ಸಾವಂತ್
ಮುಂಬೈ , ಗುರುವಾರ, 29 ನವೆಂಬರ್ 2018 (07:38 IST)
ಮುಂಬೈ : ಬಾಲಿವುಡ್ ನ ದೀಪಿಕಾ ರಣವೀರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಾಯ್ತು, ಇನ್ನು ಪ್ರಿಯಾಂಕ ಚೋಪ್ರಾ ಹಸೆಮಣೆ ಏರಲು ರೆಡಿಯಾಗಿದ್ದಾರೆ. ಈ ನಡುವೆ ಇದೀಗ ಬಾಲಿವುಡ್ ಮತ್ತೊಬ್ಬ ನಟಿ ಮದುವೆಯಾಗಲು ಮುಂದಾಗಿದ್ದಾರೆ.


ಆ ನಟಿ ಬೇರೆ ಯಾರು ಅಲ್ಲ. ಯಾವಾಗಲೂ ವಿವಾದಗಳ ಮೂಲಕ ಸುದ್ದಿಯಾಗುತ್ತಿರುವ ನಟಿ ರಾಖಿ ಸಾವಂತ್. ಹೌದು. ಕರಣ್ ಜೋಹರ್ ನಡೆಸಿಕೊಡುವ 'ಇಂಡಿಯಾ ಗಾಟ್ ಟಾಲೆಂಟ್' ನಲ್ಲಿ ಕಾಣಿಸಿಕೊಂಡಿದ್ದ ದೀಪಕ್ ಕಲಾಲ್ ಎನ್ನುವ ವ್ಯಕ್ತಿಯನ್ನು ಈಗ ರಾಖಿ ಸಾವಂತ್ ಮದುವೆಯಾಗಲಿದ್ದಾರೆ ಎಂದು ತಿಳಿದುಬಂದಿದೆ. ಈ ವಿಚಾರವನ್ನು ಬುಧುವಾರ ಸ್ವತಃ ರಾಖಿ ಸಾವಂತ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಲಗ್ನ ಪತ್ರವನ್ನು ಹಂಚಿಕೊಳ‍್ಳುವುದರ ಮೂಲಕ ತಿಳಿಸಿದ್ದಾರೆ.


ಅಷ್ಟೇ ಅಲ್ಲದೇ ವಿಚಾರವಾಗಿ ಮಾಧ್ಯಮಗಳಿಗೆ ತಿಳಿಸಿರುವ ರಾಖಿ ಸಾವಂತ್ " ಹೌದು ನಾವು ಮದುವೆಯಾಗುತ್ತಿದ್ದೇವೆ. ಸಿನಿಮಾರಂಗದಲ್ಲಿ ಎಲ್ಲರು ಮದುವೆಯಾಗುತ್ತಿದ್ದಾರೆ. ಅದಕ್ಕೆ ನಾನು ಇದು ಮದುವೆಯಾಗಲು ಸೂಕ್ತ ಸಮಯವೆಂದು ಭಾವಿಸಿ ಮದುವೆಯಾಗುತ್ತಿದೇನೆ" ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರಜನೀಕಾಂತ್ 2.0 ಚಿತ್ರದ ಬಿಡುಗಡೆಗೆ ಎದುರಾಗಿದೆ ಸಂಕಷ್ಟ