ಗುಟ್ಟಾಗಿ ಹನಿಮೂನ್ ಮಾಡಬೇಕೆಂದಿದ್ದ ದೀಪಿಕಾ-ರಣವೀರ್ ಪ್ಲ್ಯಾನ್ ಹಾಳು ಮಾಡಿದ ಲಂಕಾ ಕ್ರಿಕೆಟಿಗ ಜಯಸೂರ್ಯ!

ಸೋಮವಾರ, 31 ಡಿಸೆಂಬರ್ 2018 (11:27 IST)
ಕೊಲೊಂಬೋ: ಮದುವೆಯಾದ ಬಳಿಕ ತಮ್ಮ ಸಿನಿಮಾ ರಿಲೀಸ್ ನಲ್ಲಿ ಬ್ಯುಸಿಯಾಗಿದ್ದ ರಣವೀರ್ ಸಿಂಗ್ ಪತ್ನಿ ದೀಪಿಕಾ ಪಡುಕೋಣೆ ಜತೆ ಹನಿಮೂನ್ ಗೆ ಹೋಗಲಾಗಿರಲಿಲ್ಲ.


ಆದರೆ ಈಗ ಬಿಡುವು ಮಾಡಿಕೊಂಡು ರಹಸ್ಯ ಸ್ಥಳವೊಂದರಲ್ಲಿ ತಮ್ಮದೇ ಖಾಸಗಿ ಸಮಯ ಕಳೆಯಬೇಕೆಂದಿದ್ದ ಜೋಡಿಯ ಪ್ಲ್ಯಾನ್ ಗೆ ಶ್ರೀಲಂಕಾ ಕ್ರಿಕೆಟಿಗ ಸನತ್ ಜಯಸೂರ್ಯ ಅಡ್ಡಿಯಾಗಿದ್ದಾರೆ!

ಹೇಗೆ ಅಂತೀರಾ? ಮಾಧ್ಯಮಗಳ ಕಣ್ಣಿಗೆ ಬೀಳದಂತೆ ದ್ವೀಪ ರಾಷ್ಟ್ರದಲ್ಲಿ ಹನಿಮೂನ್ ಮಾಡಿಕೊಳ್ಳಬೇಕೆಂದಿದ್ದ ದೀಪಿಕಾ-ರಣವೀರ್ ಜೋಡಿ ಸನತ್ ಜಯಸೂರ್ಯರನ್ನು ಭೇಟಿಯಾಗಿದ್ದರು. ಈ ಹಾಟ್ ಜೋಡಿಯ ಜತೆ ರೆಸ್ಟೋರೆಂಟ್ ಒಂದರಲ್ಲಿ ಕೆಲ ಸಮಯ ಕಳೆದ ಜಯಸೂರ್ಯ ಅಷ್ಟಕ್ಕೇ ಸುಮ್ಮನಾಗದೇ ಆ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಆ ಮೂಲಕ ದೀಪಿಕಾ-ರಣವೀರ್ ಎಲ್ಲಿದ್ದಾರೆಂಬ ಗುಟ್ಟು ರಟ್ಟು ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕೂದಲು ಕತ್ತರಿಸಿಕೊಂಡ ಜಾಹ್ನವಿ ಕಪೂರ್ ಗೆ ಈಗ ಅಪ್ಪನ ಭಯ!