ಕೂದಲು ಕತ್ತರಿಸಿಕೊಂಡ ಜಾಹ್ನವಿ ಕಪೂರ್ ಗೆ ಈಗ ಅಪ್ಪನ ಭಯ!

ಸೋಮವಾರ, 31 ಡಿಸೆಂಬರ್ 2018 (11:15 IST)
ಮುಂಬೈ: ಮಗಳ ಉದ್ದ ಕೂದಲು ನೋಡಿ ಹೆಮ್ಮೆಪಡದ ಅಪ್ಪಂದಿರು ಯಾರಿಲ್ಲ ಹೇಳಿ? ಅವರಲ್ಲಿ ಬೋನಿ ಕಪೂರ್ ಕೂಡಾ ಒಬ್ಬರು.


ಶ್ರೀದೇವಿ ಪುತ್ರಿ ಜಾಹ್ನವಿ ಇದೀಗ ಮ್ಯಾಗಜಿನ್ ಒಂದರ ಮುಖಪುಟದ ಫೋಟೋ ಶೂಟ್ ಗಾಗಿ ಗ್ಲಾಮರಸ್ ಆಗಿ ಕಾಣಲು ತಮ್ಮ ಕೂದಲುಗಳನ್ನು ಚಿಕ್ಕದಾಗಿ ಕತ್ತರಿಸಿಕೊಂಡಿದ್ದಾರೆ. ಆದರೆ ಈ ರೀತಿ ಮಾಡಿದ್ದೇನೇ ಆಯ್ತು. ಫೋಟೋ ಶೂಟ್ ಕೂಡಾ ಆಯ್ತು.

ಆದರೆ ಈಗ ಜಾಹ್ನವಿಗೆ ಅಪ್ಪ ಬೋನಿ ಕಪೂರ್ ಭಯ ಕಾಡಿದೆಯಂತೆ. ತಾನು ಕೂದಲು ಕತ್ತರಿಸುವ ವಿಚಾರವೇನಾದರೂ ಅಪ್ಪನಿಗೆ ತಿಳಿದರೆ ಅವರು ನನ್ನ ಕೊಂದೇ ಬಿಡುತ್ತಾರೆ ಎಂದು ಜಾಹ್ನವಿ ಪ್ರಲಾಪಿಸಿಕೊಂಡಿದ್ದಾಳೆ. ಆದರೆ ಹಾಗಂತ ಈ ವಿಚಾರವನ್ನು ಜಾಹ್ನವಿ ಮುಚ್ಚಿಟ್ಟುಕೊಂಡಿಲ್ಲ. ಹೊಸ ವರ್ಷಕ್ಕೆ ತನ್ನ ಹೊಸ ಅವತಾರ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಯಬಿಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕನ್ನಡ ಚಿತ್ರರಂಗಕ್ಕೆ ಇನ್ನೊಂದು ಶಾಕ್! ಅಂಕಲ್ ಲೋಕನಾಥ್ ಇನ್ನಿಲ್ಲ!